ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 1 AUGUST 2024 : ಲಿಂಗನಮಕ್ಕಿ ಜಲಾಶಯದ ಮೂರು ಗೇಟ್‌ಗಳ (Gates) ಮೂಲಕ ಇವತ್ತು ನೀರು ಹೊರಬಿಡಲಾಯಿತು. 10 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಯಿತು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಪ್ರಸ್ತುತ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಒಂದು ವೇಳೆ 50 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಸುಮಾರು 450 ಮನೆಗಳು ಜಲಾವೃತವಾಗಲಿವೆ. ಒಂದು ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟರೆ ಸುಮಾರು 2 ಸಾವಿರ ಮನೆಗಳು ಮುಳುಗಡೆ ಆಗಲಿವೆ ಎಂದರು.
ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ವಿಚಾರ ತಿಳಿದು ಸುತ್ತಮುತ್ತಲ ನಿವಾಸಿಗಳು, ಕೆಪಿಸಿ ಸಿಬ್ಬಂದಿ, ಅವರ ಕುಟುಂಬದವರು ಜಲಾಶಯದ ಮುಂದೆ ಸೇರಿದ್ದರು. ಪ್ರತಿ ಗೇಟ್‌ನಿಂದ ನೀರು ಹೊರ ಬಿಡುತ್ತಿದ್ದಂತೆ ನೆರೆದಿದ್ದವರು ಸಂಭ್ರಮಿಸಿದರು.
ಇದನ್ನೂ ಓದಿ ⇓
ಅಪಾಯದ ಸ್ಥಿತಿಯಲ್ಲಿ ಮರಗಳು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಸೂಚಿಸಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422