ಪುರಾತನ ಮನೆಯಲ್ಲಿ ಬೆಂಕಿ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ, ಹೇಗಾಯ್ತು ಘಟನೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 28 APRIL 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

BYKODU : ಸಮೀಪದ ಹುರುಳಿಯ ಮಹಾವೀರ ಜೈನ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಒಂದೇ ಮನೆಯಲ್ಲಿ ವಿಜಯ್ ಕುಮಾರ್ ಮತ್ತು ಮಹಾವೀರ ಅವರ ಕುಟುಂಬಗಳು ವಾಸವಾಗಿದ್ದವು.

ಎರಡು ಕುಟುಂಬದ ಸದಸ್ಯರು ಶನಿವಾರ ಬೇರಾಳದ ಚಂದ್ರನಾಥ ಬಸದಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಹೊಗೆ ಕಂಡ ನೆರೆಹೊರೆಯವರು ಮನೆ ಬಾಗಿಲು ಒಡೆದು ಸಮಾರೋಪಾದಿಯಲ್ಲಿ ಬೆಂಕಿ ನಂದಿಸಿದ್ದಾರೆ.

ಸುಮಾರು 50 ಲಕ್ಷ ರೂ. ನಷ್ಟ

ಘಟನೆಯಿಂದಾಗಿ ಮನೆಯಲ್ಲಿ ಸಂಗ್ರಹಿಸಿರುವ ಸಿಪ್ಪೆ ಗೋಟು, ಕೆಂಪಡಕೆ, ಕಾಳುಮೆಣಸು, ಲವಂಗ, ಜಾಯಿಕಾಯಿ ಹಾಗೂ ಬೆಲೆಬಾಳುವ ಪೀಠೋಪಕರಣಗಳು, ದಾಸ್ತಾನುಗೊಳಿಸಿದ ಆಹಾರ ಸಾಮಗ್ರಿಗಳು, ಬಟ್ಟೆ ವಸ್ತು ಒಡವೆಗಳು ಸುಟ್ಟು ಕರಕಲಾಗಿದ್ದು, ಅಂದಾಜು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕುಟುಂಬದ ಮುಖ್ಯಸ್ಥ ಮಹಾವೀರ ಜೈನ್ ಮತ್ತು ವಿಜಯ್ ಕುಮಾರ್ ಜೈನ್ ತಿಳಿಸಿದ್ದಾರೆ. 

hurali

ಸುಮಾರು 200 ವರ್ಷಗಳ ಮನೆ ಸುಟ್ಟು ಕರಕಲಾಗಿರುವುದು ಕಂಡು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿನ್ನೀರಿಗೆ ಜಾರಿದ ಟ್ಯಾಂಕರ್‌

truck at sigandur launch rampTUMARI : ಪೆಟ್ರೋಲ್‌ ಟ್ಯಾಂಕರ್‌ ಲಾರಿಯೊಂದು ಶನಿವಾರ ಶರಾವತಿ ಹಿನ್ನೀರಿಗೆ ಜಾರಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ. ಹೊಳೆಬಾಗಿಲಿನಲ್ಲಿ ಘಟನೆ ಸಂಭವಿಸಿದೆ. ಲಾಂಚ್‌ ನಿಲ್ಲಿಸುವ ರ‍್ಯಾಂಪ್‌ ಮೇಲಿಂದ ಟ್ಯಾಂಕರ್‌ ಲಾರಿ ಹಿನ್ನೀರಿಗೆ ಜಾರಿದೆ. ಸಿಗಂದೂರಿಗೆ ತೆರಳು ಲಾಂಚ್‌ಗಳು ಇದೇ ರ‍್ಯಾಂಪ್‌ಗಳನ್ನು ಬಳಸಿ ನಿಲ್ಲುತ್ತವೆ.

ಇದನ್ನೂ ಓದಿ – ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ದಿನಾಂಕ ನಿಗದಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment