ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 8 FEBRUARY 2025
ಸಾಗರ / ಶಿರಾಳಕೊಪ್ಪ : ATM ಕೇಂದ್ರದಲ್ಲಿ ಸಹಾಯ ಹಸ್ತ ಚಾಚಿ, ವಂಚಿಸುತ್ತಿದ್ದ ಖದೀಮರು ತಮ್ಮ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಟಿಗಷ್ಟೆ ಸೀಮಿತಗೊಳಿಸಿಲ್ಲ. ಈಗ ಕಾರ್ಗಲ್ ಮತ್ತು ಶಿರಾಳಕೊಪ್ಪ ಠಾಣೆಗಳಲ್ಲು ಪ್ರಕರಣ ದಾಖಲಾಗಿದೆ.
ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸುತ್ತಾರೆ. ಅವರ ಎಟಿಎಂ ಕಾರ್ಡ್ ಪಡೆದು, ಪಾಸ್ ವರ್ಡ್ ತಿಳಿದು, ಬಳಿಕ ಎಟಿಎಂ ಕಾರ್ಡ್ ಅದಲು ಬದಲು ಮಾಡಿಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದವು.
ಕಾರ್ಗಲ್ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?

ನಿವೃತ್ತ ಉದ್ಯೋಗಿ ಬಾಲಯ್ಯ ಅವರು ಕಾರ್ಗಲ್ನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ತೆರಳಿದ್ದರು. ಹಣ ಬಿಡಿಸಲು ನೆರವು ನೀಡುವುದಾಗಿ ಇಬ್ಬರು ಅಪರಿಚಿತರು ಧಾವಿಸಿದ್ದರು. ಬಾಲಯ್ಯ 10 ಸಾವಿರ ರೂ. ಹಣ ಬಿಡಿಸಿಕೊಂಡು, ಅಪರಿಚಿತರಿಂದ ಎಟಿಎಂ ಕಾರ್ಡ್ ಹಿಂಪಡೆದಿದ್ದರು.
ಆ ಬಳಿಕ ಬಾಲಯ್ಯ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.49 ಲಕ್ಷ ರೂ. ಹಣ ಡ್ರಾ ಆಗಿತ್ತು. ಪರಿಶೀಲಿಸಿದಾಗ ಎಟಿಎಂ ಕಾರ್ಡ್ ಬದಲಾಗಿರುವುದು ಬಾಲಯ್ಯ ಗಮನಕ್ಕೆ ಬಂದಿತ್ತು. ಘಟನೆ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಳಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?

ಗಾರೆ ಕೆಲಸ ಮಾಡುವ ದಸ್ತಗೀರ್ ಎಂಬುವವರು ಶಿರಾಳಕೊಪ್ಪದ ಕೆನರಾ ಬ್ಯಾಂಕ್ ಎಟಿಎಂನಲ್ಲಿ 5 ಸಾವಿರ ರೂ. ಹಣ ಬಿಡಿಸಲು ತೆರಳಿದ್ದರು. ಆಗ ಅವರಿಗೆ ಇಬ್ಬರು ಅಪರಿಚಿತರು ಸಹಾಯ ಮಾಡಿದ್ದರು. ಅದೇ ದಿನ ಸಂಜೆ ದಸ್ತಗೀರ್ ಅವರ ಖಾತೆಯಿಂದ 95 ಸಾವಿರ ರೂ. ಹಣ ವಿತ್ ಡ್ರಾ ಆಗಿರುವುದು ಗೊತ್ತಾಗಿದೆ.
ಪರಿಶೀಲಿಸಿದಾಗ ದಸ್ತಗೀರ್ ಅವರ ಎಟಿಎಂ ಕಾರ್ಡ್ ಬದಲಾಗಿತ್ತು. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ, ಯಾವ್ಯಾವ ತಾಲೂಕಿಗೆ ಯಾರೆಲ್ಲ ಆಯ್ಕೆಯಾಗಿದ್ದಾರೆ?
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






