ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 27 AUGUST 2024 : ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಗೇಟ್‌ಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ಪುನಃ ಮೈದುಂಬಿಕೊಂಡಿದೆ.
ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ ಎರಡು ದಿನದಿಂದ ಒಳ ಹರಿವು ಹೆಚ್ಚಳವಾಗಿದೆ. ಇವತ್ತು 36,564 ಕ್ಯೂಸೆಕ್ ಒಳ ಹರಿವು ಇದೆ. ಗೇಟ್ ಮೂಲಕ 17,506 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಟ್ಟು 25,202 ಕ್ಯೂಸೆಕ್ ನೀರು ಹೊರ ಹರಿವಿದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಇವತ್ತು 1817.55 ಅಡಿ ನೀರು ಭರ್ತಿಯಾಗಿದೆ.» ಲಿಂಗನಮಕ್ಕಿಗೆ ಒಳ ಹರಿವು ಹೆಚ್ಚಳ
ಸೋಮವಾರದಿಂದಲೇ ನೀರು ಹೊರಕ್ಕೆ
ಸೋಮವಾರದಿಂದಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. 9 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್‌ವರೆಗೆ ನೀರನ್ನು ಹೊರಗೆ ಹರಿಸಲಾಗಿತ್ತು. ಇದರಿಂದ ಶರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಮೈದುಂಬಿದ ಜೋಗ ಜಲಪಾತ
ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ ಜೋಗ ಜಲಪಾತ ಪುನಃ ಮೈದುಂಬಿಕೊಂಡಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತದಿಂದ ಗುರುತು ಸಿಗದಂತೆ ನೀರು ದುಮ್ಮಿಕ್ಕುತ್ತಿದೆ. ಇವತ್ತು ಜೋಗ ಜಲಪಾತದ ವೈಭವವನ್ನು ಜೋಗದ ಗೈಡ್ ನಾಗರಾಜ್ ಸೆರೆ ಹಿಡಿದ ಫೋಟೊ ಇಲ್ಲಿದೆ.
ಇದನ್ನೂ ಓದಿ ⇒ ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422