ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA | 1 ಮೇ 2020
ಲಾಕ್ಡೌನ್ ಪರಿಣಾಮ ಒಂದು ತಿಂಗಳಿಂದ ದಕ್ಷಿಣ ಕನ್ನಡದಲ್ಲಿ ಸಿಲುಕಿದ್ದ ಕುಟುಂಬವೊಂದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದ ಕುಟುಂಬವನ್ನು, ತವರೂರಿಗೆ ತಲುಪಿಸಿದ್ದಾರೆ ಸಿಎಂ.
ಶಿಕಾರಿಪುರದ ಓರ್ವ ಗರ್ಭಿಣಿ ಮತ್ತು ಆಕೆಯ ಕುಟುಂಬದವರು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದರು. ಒಂದು ತಿಂಗಳಿಂದ ಈ ಕುಟುಂಬ ಇಲ್ಲಿನ ಶಾಲೆಯಲ್ಲಿ ಉಳಿದುಕೊಂಡಿತ್ತು. ಆದರೆ ಜೀವನ ನಿರ್ವಹಣೆ ಕಷ್ಟಕರವಾದ ಹಿನ್ನೆಲೆ, ತಮ್ಮೂರಿಗೆ ತೆರಳಲು ಅವಕಾಶ ನೀಡೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕುಟುಂಬವನ್ನು ಶಿಕಾರಿಪುರಕ್ಕೆ ಕಳುಹಿಸಿಕೊಡುವಂತೆ ಸಿಎಂ ಸೂಚಿಸಿದ್ದರು.
ಶಿಕಾರಿಪುರಕ್ಕೆ ಹೇಗೆ ಬಂತು ಈ ಕುಟುಂಬ?
ಗರ್ಭಿಣಿ ಸೇರಿ ಏಳು ಮಂದಿಯನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಶಿಕಾರಿಪುರಕ್ಕೆ ಕಳುಹಿಸಬೇಕು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಇದರ ಉಸ್ತುವಾರಿ ನೀಡಲಾಗಿತ್ತು. ಅದರಂತೆ ಆ ಕುಟುಂಬ ಶಿಕಾರಿಪುರಕ್ಕೆ ಬಂದಿದ್ದು, ತಮ್ಮೂರಿಗೆ ತಲುಪಿದ್ದಾರೆ.
ಕೆಲಸಕ್ಕೆಂದು ಈ ಕುಟುಂಬ ದಕ್ಷಿಣ ಕನ್ನಡಕ್ಕೆ ತೆರಳಿತ್ತು. ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಲಾಕ್ಡೌನ್ ಘೋಷಣೆಯಾಗಿ, ಅಲ್ಲಿಯೇ ಉಳಿಯುವಂತಾಯಿತು. ಆದರೆ ಜೀವನ ನಿರ್ವಹಣೆ ಕಷ್ಟ ಮತ್ತು ಗರ್ಭಿಣಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422