ಕುಮದ್ವತಿ ಕಾಲೇಜು ಮುಂದೆ ಬಸ್‌ ಪಲ್ಟಿ ಪ್ರಕರಣ, ಚಾಲಕನಿಗೆ ಸಂಕಷ್ಟ

Published On : ಏಪ್ರಿಲ್ 18, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿಕಾರಿಪುರ: ಪಟ್ಟಣದ ಕುಮದ್ವತಿ ಕಾಲೇಜು ಸಮೀಪ ಇತ್ತೀಚೆಗೆ ಖಾಸಗಿ ಬಸ್‌ ಪಲ್ಟಿ ಸಂಬಂಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್‌ ಚಾಲಕನ (driver) ವಿರುದ್ಧ ಪ್ರಯಾಣಿಕರು ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಶಿವಮೊಗ್ಗ ತಾಲ್ಲೂಕು ಮಲ್ಲಾಪುರ ಗ್ರಾಮದ ಶಿಕ್ಷಕ ಶಿವಕುಮಾರ್ ಎಸ್. ಅವರು ಶಿಕ್ಷಕರ ತರಬೇತಿಗಾಗಿ ಸವಳಂಗದಿಂದ ಶಿಕಾರಿಪುರಕ್ಕೆ ವಿಜಯ ಕಂಪನಿಯ ಬಸ್ಸಿನಲ್ಲಿ ಬರುತ್ತಿದ್ದರು. ಈ ವೇಳೆ ಬಸ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿ, ಬಸ್ಸನ್ನು ದಿಢೀರ್ ತಿರುಗಿಸಿದ ಪರಿಣಾಮ ವಾಹನವು ರಸ್ತೆ ಮಧ್ಯದ ಡಿವೈಡರ್ ಹತ್ತಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದೆ.

Bus-Mishap-in-front-of-Kumadvati-College-in-Shikaripura-taluk

ಇದನ್ನೂ ಓದಿ : ಮನೆ ಬೀಗ ಮುರಿದು ₹8.10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಸ್ಥಳೀಯರು ಕೂಡಲೇ ಅಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 18, 2026

Leave a Comment