ತೊಟ್ಟಿಲು ಶಾಸ್ತ್ರಕ್ಕೆ ಹೊರಟವರಿಗೆ ನಡು ರಸ್ತೆಯಲ್ಲಿ ಎದುರಾದ ಜವರಾಯ, ವ್ಯಕ್ತಿ ಸಾವು, ಹಲವರಿಗೆ ಗಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 9 JUNE 2023

SHIKARIPURA : ತೊಟ್ಟಿಲು ಶಾಸ್ತ್ರಕ್ಕೆ ಹೋಗುತ್ತಿದ್ದ ದಿಬ್ಬಣದ (Dibbana) ಆಟೋಗೆ ಬೊಲೇರೊ ವಾಹನ ಡಿಕ್ಕಿ ಹೊಡೆದು ವ್ಸಾಕ್ತಿ ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Dibbana-Auto-Bolero-Mishap-at-Jakkanahalli-in-Shikaripura-MP-visit

ಶಿಕಾರಿಪುರ ತಾಲೂಕು ಜಕ್ಕನಹಳ್ಳಿ ಗ್ರಾಮದಲ್ಲಿ ರಾತ್ರಿ ಘಟನೆ ಸಂಭವಿಸಿದೆ. ಬಿದರಕೊಪ್ಪ ತಾಂಡ ವಾಸಿ ರಾಮ್‌ಜಿ ನಾಯ್ಕ (72) ಮೃತಪಟ್ಟಿದ್ದಾರೆ.

ಹೇಗಾಯ್ತು ಅಪಘಾತ?

ಬಿದರಕೊಪ್ಪ ತಾಂಡದಿಂದ ಎಳನೀರುಕೊಪ್ಪ ಗ್ರಾಮದಲ್ಲಿ ನಡೆಯುತ್ತಿದ್ದ ತೊಟ್ಟಿಲು ಶಾಸ್ತ್ರ (Dibbana) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಟೋದಲ್ಲಿ ತೆರಳುತ್ತಿದ್ದರು. ಜಕ್ಕನಹಳ್ಳಿ ಸಮೀಪ ಹಂಪ್‌ ಬಳಿ ಆಟೋ ವೇಗ ತಗ್ಗಿದೆ. ಈ ವೇಳೆ ಹಿಂಬದಿಯಿಂದ ಬಂದ ಬೊಲೇರೊ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ –  ಆಯನೂರು ಕೊಲೆ ಪ್ರಕರಣ, 3 ಪ್ರತ್ಯೇಕ ಕೇಸ್‌ ದಾಖಲು, ಯಾವ್ಯಾವ ಪ್ರಕರಣದಲ್ಲಿ ಏನೇನಿದೆ?

ಘಟನೆಯಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಇನ್ನೋವಾ‌, ಬೈಕ್ ಮುಖಾಮುಖಿ ಡಿಕ್ಕಿ, ಸಿಸಿಟಿವಿ ದೃಶ್ಯ ಹೇಳಿತು ಸಾಕ್ಷಿ

ವಿಚಾರ ತಿಳಿಯುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಶಿಕಾರಿಪುರದ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಗತ್ಯ ನೆರವು ನೀಡುವ ಭರವಸೆ ನೀಡಿದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment