ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 16 MAY 2023
SHIKARIPURA : ಬಿ.ವೈ.ವಿಜಯೇಂದ್ರ ಅವರು ಚುನಾವಣೆಯಲ್ಲಿ ಗೆಲ್ಲಬಾರದು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ರಾಜಕೀಯ ಏಳಿಗೆ ಸಹಿಸಲಾಗದೆ ಪುನುಗು ಬೆಕ್ಕು ಬಲಿ ಕೊಟ್ಟು ಮಾಟ (Maata Mantra) ಮಾಡಿಸಲಾಗಿದೆ. ಇದರಿಂದ ತಮ್ಮ ಕುಟುಂಬದ ಮೇಲೆ ಪರಿಣಾಮ ಉಂಟಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.

ಶಿಕಾರಿಪುರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ತೋಟದಲ್ಲಿ ಪುನುಗು ಬೆಕ್ಕು ಬಲಿ ಕೊಟ್ಟು ಮಾಟ ಮಂತ್ರ ಮಾಡಲಾಗಿದೆ ಎಂದರು.
ತೋಟದ ಕಾಂಪೌಂಡ್ ಪಕ್ಕದಲ್ಲಿ ಮಾಟ
ತೋಟದ ಮನೆಯ ಕಾಂಪೌಂಡ್ ಪಕ್ಕದಲ್ಲಿ ಮೇ 11ರ ರಾತ್ರಿ 10 ಗಂಟೆ ಸಮಯದಲ್ಲಿ ಪೂಜೆ ನಡೆಸಲಾಗಿದೆ. ಪುನುಗು ಬೆಕ್ಕನ್ನು ಬಲಿ ಕೊಟ್ಟು, ಅಲ್ಲಿಯೇ ಹೂಳಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ. ಪುನುಗು ಬೆಕ್ಕು ಬಲಿ ನೀಡಿರುವ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ತಮ್ಮ ಕುಟುಂಬದ ರಾಜಕೀಯ ಏಳಿಗೆ ಸಹಿಸಲಾಗಿದೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ರಾಘವೇಂದ್ರ ಆರೋಪಿಸಿದರು.
WATCH VIDEO
[su_button url=”https://admission.parishramaneetacademy.com/smglive/” target=”blank” style=”glass” background=”#0003ab” color=”#ffffff” size=”6″ radius=”0″ icon=”icon: chevron-right”]ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ[/su_button]
ಮಾಟದಿಂದ ಪರಿಣಾಮ ಆಗಿದೆ
ಬಿ.ವೈ.ವಿಜಯೇಂದ್ರ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬಾರದು ಎಂದು ವಾಮಾಚಾರ ಮಾಡಿಸಲಾಗಿದೆ. ಮಾಟ ಮಂತ್ರದಿಂದ (Maata Mantra) ತಮ್ಮ ಕುಟುಂಬದ ಮೇಲೆ ಪರಿಣಾಮ ಉಂಟಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಸಣ್ಣಪುಟ್ಟ ಸಮಸ್ಯೆಯಾಗಿದೆ. ತಮ್ಮ ಮನೆಗೆ ಬರುತ್ತಿದ್ದ ಸಂಬಂಧಿಕರ ಕಾರು ಅವಘಡಕ್ಕೀಡಾಗಿದೆ. ಮಾಟ ಮಂತ್ರದಿಂದ ತೊಂದರೆ ಆಗಿದ್ದರೆ ಅದರ ನಿವಾರಣೆಗೆ ಬರುತ್ತಿದ್ದ ವೈದಿಕರ ಕಾರು ಅಪಘಾತಕ್ಕೀಡಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಕಾಗೋಡು ಕುಟುಂಬದ ಸಂಸ್ಥೆಯ ಹಿಂಬಾಗಿಲಿನ ಬೀಗಿ ಮುರಿದ ಕಳ್ಳರು, ಸಾಕ್ಷಿ ನಾಶಕ್ಕೆ ಸಿಸಿಟಿವಿಯನ್ನೂ ಹೊತ್ತೊಯ್ದರು
ಪ್ರಮುಖರಾದ ಕೆ.ಎಸ್.ಗುರುಮೂರ್ತಿ, ವೀರೇಂದ್ರ ಪಾಟೀಲ್, ಟಿ.ಎಸ್.ಮೋಹನ್, ಕಬಾಡಿ ರಾಜಣ್ಣ, ಸುರೇಶ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ – ಮಧ್ಯರಾತ್ರಿ 12.30ಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಮಿಸ್ಡ್ ಕಾಲ್, ಎಸ್ಪಿಗೆ ದೂರು, ಎಲ್ಲಿಂದ ಬಂದಿತ್ತು ಫೋನ್?
[su_animate type=”bounceInUp”][su_button url=”https://chat.whatsapp.com/Gw9Vd0MvljO9kI4k7LDRmj” target=”blank” style=”glass” background=”#0003ab” color=”#ffffff” size=”6″ radius=”0″ icon=”https://shivamoggalive.com/wp-content/uploads/2022/11/Whatspp-Logo.png“]ಶಿವಮೊಗ್ಗ ಲೈವ್ ವಾಟ್ಸಪ್ ಗ್ರೂಪ್ ಸೇರಲು ಕ್ಲಿಕ್ ಮಾಡಿ[/su_button][/su_animate]
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















