ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 AUGUST 2023
SHIKARIPURA : ಈದ್ ಮಿಲಾದ್ ಹಬ್ಬ ಆಚರಣೆ ಕಮಿಟಿ ಅಧ್ಯಕ್ಷ ಸ್ಥಾನದ (President Post) ವಿಚಾರವಾಗಿ ಜಗಳ ನಡೆದು ಸಭೆಯಲ್ಲೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಗಲಾಟೆ, ಚಾಕು ಚುಚ್ಚಿ ಕೊಲೆ
ಆ.21ರಂದು ಶಿಕಾರಿಪುರದ ಕೆ.ಹೆಚ್.ಬಿ ಕಾಲೋನಿಯಲ್ಲಿ ನಡೆಯುತ್ತಿದ್ದ ಸಭೆ ಮಧ್ಯೆ (President Post) ಗಲಾಟೆಯಾಗಿದೆ. ಈ ವೇಳೆ ಜನ್ನತ್ ಗಲ್ಲಿಯ ಮೊಹಮ್ಮದ್ ಜಾಫರ್ (32) ಎಂಬಾತನಿಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏಳು ಆರೋಪಿಗಳು ಅರೆಸ್ಟ್
ತನಿಖೆ ನಡೆಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಆ.22ರಂದು ಸೊಸೈಟಿ ಕೇರಿಯ ಬಾಷಾ (42) ಎಂಬಾತನನ್ನು ಬಂಧಿಸಲಾಗಿತ್ತು. ಆ.25ರಂದು ರೋಷನ್ (19), ಸದ್ದಾಂ ಹುಸೇನ್ (31), ಸಲ್ಮಾನ್ ಅಲಿಯಾಸ್ ಸಲೀಂ (22), ಇಮ್ರಾನ್ (30), ಆರೀಫ್ ಜಾನ್ (33) ಮತ್ತು ಎಸ್.ಎನ್. ಬಾಬು ಅಲಿಯಾಸ್ ಸಾಬಿರ್ ಅಹಮ್ಮದ್ (42) ಬಂಧಿತರು.

ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಶಿಕಾರಿಪುರದ ಸೊಸೈಟಿ ಕೇರಿ ಮತ್ತು ಗಗ್ರಿ ಏರಿಯಾದವರ ಮಧ್ಯೆ ವೈಮನಸು ಸೃಷ್ಟಿಯಾಗಿತ್ತು. ಇದೇ ವಿಚಾರದಲ್ಲಿ ಆ.21ರಂದು ಗಲಾಟೆಯಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದ ಆರೋಪಿಗಳನ್ನು ಬಂಧಿಸಲಾಗಿದೆ. ಶಿಕಾರಿಪುರ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಶಿಕಾರಿಪುರ ಠಾಣೆ ಇನ್ಸ್‌ಪೆಕ್ಟರ್ ರುದ್ರೇಶ ನೇತೃತ್ವದಲ್ಲಿ, ಪಿಎಸ್‌ಐಗಳಾದ ಪ್ರಶಾಂತ್ ಕುಮಾರ್, ರಾಜುರೆಡ್ಡಿ, ಕೋಮಲಾಚಾರ್, ಶರತ್, ಎಎಸ್‌ಐ ಮಲ್ಲೇಶಪ್ಪ, ವಿಶ್ವನಾಥ್, ಸಿಬ್ಬಂದಿ ಹೆಚ್.ಸಿ.ಶಿವಕಮಾರ್, ಶಿವಾನಂದ ಗಾಮದ್, ಗಂಗಾಧರ ಅನಗವಾಡಿ, ಅಶೋಕ, ಪ್ರಶಾಂತ್, ಹಜರತ್ ಅಲಿ, ರಾಘವೇಂದ್ರ, ಕೊಟ್ರೇಶ, ಆದರ್ಶ, ಚನ್ನೇಶ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
LATEST NEWS
- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

About The Editor
ನಿತಿನ್ ಆರ್.ಕೈದೊಟ್ಲು















