ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಆನ್‌ಲೈನ್ ಟ್ರೇಡಿಂಗ್ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಶಿಕಾರಿಪುರದ ರೈತರೊಬ್ಬರಿಗೆ 9.47 ಲಕ್ಷ ರೂ. ವಂಚನೆಯಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಂಚನೆ ಆಗಿದ್ದು ಹೇಗೆ?
ಶಿಕಾರಿಪುರದ ರೈತ (ಹೆಸರು ಗೌಪ್ಯ) ಟ್ರೇಡಿಂಗ್ ಮಾಡುವ ಸಲುವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ FXW ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಬಳಿಕ ಅಪರಿಚಿತ ಮೊಬೈಲ್ ನಂಬರ್‌ಗಳಿಂದ ವಾಟ್ಸಪ್‌ಗೆ ಕರೆ ಬಂದಿತ್ತು. ಟ್ರೇಡಿಂಗ್ ಮಾಡಲು ತಮ್ಮ ಖಾತೆ ತೆರೆಯಬೇಕು ಎಂದು ತಿಳಿಸಿದ್ದು 25 ಸಾವಿರ ರೂ. ಹಣ ಹಾಕುವಂತೆ ತಿಳಿಸಿದ್ದರು. ಮತ್ತೊಮ್ಮೆ ಕರೆ ಮಾಡಿ ಇನ್ನೂ 25 ಸಾವಿರ ರೂ. ಹಣ ವರ್ಗಾಯಿಸಿಕೊಂಡಿರುತ್ತಾರೆ. ಹೀಗೆ ಟ್ರೇಡಿಂಗ್ ಮಾಡುವುದಾಗಿ ತಿಳಿಸಿ ಫೋನ್ ಪೇ ಮತ್ತು ಆರ್‌ಟಿಜಿಎಸ್ ಮೂಲಕ ಒಟ್ಟು 9.47 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದರು.
ಇದನ್ನೂ ಓದಿ – ಫೈನಾನ್ಸ್ ಸಂಸ್ಥೆಯಲ್ಲಿ ಸುಲಭವಾಗಿ 2 ಲಕ್ಷ ರೂ.ವರೆಗೆ ಸಾಲ, ನಂಬಿದ ಭದ್ರಾವತಿ ಯುವಕನಿಗೆ ಕಾದಿತ್ತು ಆಘಾತ
ಟ್ರೇಡಿಂಗ್ ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಗೃಹಿಣಿಗೆ ಅಪರಿಚಿತನಿಂದ ಮೆಸೇಜ್, ಫೋನ್, ಕೊನೆಗೆ ಕಾದಿತ್ತು ಶಾಕ್, ನೀವೂ ಆಗಬಹುದು ಮುಂದಿನ ಟಾರ್ಗೆಟ್