ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 27 MARCH 2023
SHIKARIPURA : ಒಳ ಮೀಸಲಾತಿ ವಿರೋಧಿಸಿ ಬಂಜಾರ (Banjara) ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಮತ್ತೊಂದು ತಿರುವು ಪಡೆದಿದೆ. ಶಿಕಾರಿಪುರದ ತಾಂಡಗಳಲ್ಲಿ ರಾಜಕಾರಣಿಗಳಿಗೆ ಎಚ್ಚರಿಕೆ ನೀಡುವ ಬ್ಯಾನರ್ಗಳು ಪ್ರತ್ಯಕ್ಷವಾಗಿವೆ.

ಶಿಕಾರಿಪುರ ತಾಲೂಕಿನಲ್ಲಿ 69 ತಾಂಡಗಳಿವೆ. ಈ ಪೈಕಿ ಹಲವು ತಾಂಡಗಳಲ್ಲಿ ಫ್ಲೆಕ್ಸ್ ಪ್ರತ್ಯಕ್ಷವಾಗಿವೆ. ಊರಿನ ಮುಂಭಾಗ ಎಚ್ಚರಿಕೆಯ ಸಂದೇಶಗಳಿರುವ ಫ್ಲೆಕ್ಸ್ ಕಟ್ಟಲಾಗಿದೆ.
ಫ್ಲೆಕ್ಸ್ನಲ್ಲಿ ಏನಿದೆ?
ತಾಂಡಾಗಳ ಮುಂಭಾಗ ಫ್ಲೆಕ್ಸ್ ಹಾಕಲಾಗಿದೆ. ‘ನಮ್ಮ ತಾಂಡ, ನಮ್ಮ ರಾಜ್ಯ’ ಎಂದು ಘೋಷಿಸಲಾಗಿದೆ. ‘ವಿಧನಾಸಭೆ ಚುನಾವಣೆ ಬಹಿಷ್ಕಾರ’ದ ಎಚ್ಚರಿಕೆ ನೀಡಲಾಗಿದೆ.

‘ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲಾತಿ ಹಿಂಪಡೆಯಲು ಆಗ್ರಹಿಸಿ ಚುನಾವಣೆ ಬಹಿಷ್ಕರಿಸಲಾಗಿದೆ’ ಎಂದು ಫ್ಲೆಕ್ಸ್ನಲ್ಲಿ ಮುದ್ರಿಸಲಾಗಿದೆ. ಅಲ್ಲದೆ ಯಾವುದೆ ಪಕ್ಷದ ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರ ಆಕ್ರೋಶ, ಟ್ರಾಫಿಕ್ ಜಾಮ್
ಜಿಲ್ಲೆಯ ವಿವಿಧಡೆ ಬಂಜಾರ ಸಮುದಾಯದವರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಶಿಕಾರಿಪುರದಲ್ಲಿ ಮತದಾನ ಬಹಿಷ್ಕಾರ, ರಾಜಕಾರಣಿಗಳ ಪ್ರವೇಶ ನಿರ್ಬಂಧದ ಫ್ಲೆಕ್ಸ್ಗಳು ಚರ್ಚೆ ಹುಟ್ಟುಹಾಕಿದೆ.
LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















