ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 7 JULY 2023
GAJANURU : ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ತುಂಗಾ ಜಲಾಶಯಕ್ಕೆ (Tunga Dam) ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನ 12 ಗೇಟ್ಗಳನ್ನು ಮೇಲೆತ್ತಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒಳ, ಹೊರ ಹರಿವು ಎಷ್ಟಿದೆ?
ಗಾಜನೂರಿನ ತುಂಗಾ ಜಲಾಶಯಕ್ಕೆ (Tunga Dam) ಪ್ರಸ್ತುತ 25,971 ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೇ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ 25,936 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ ಸೇತುವೆ ಬಳಿ ಮೈದುಂಬಿದ ತುಂಗಾ ನದಿ, ಜಿಲ್ಲೆಯ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಎಷ್ಟಿದೆ?
ಎಷ್ಟು ಗೇಟ್ ಓಪನ್ ಆಗಿವೆ?
ತುಂಗಾ ಜಲಾಶಯದಲ್ಲಿ ಸದ್ಯ 12 ಗೇಟ್ಗಳನ್ನು ತಲಾ 1 ಮೀಟರ್ನಷ್ಟು ಮೇಲೆತ್ತಲಾಗಿದೆ. ಇದರ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗುರುವಾರ ಒಳ ಹರಿವು ಏರಿಕೆಯಾಗಿದ್ದರಿಂದ 10 ಗೇಟ್ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡಲಾಗಿತ್ತು. ಇವತ್ತು ಇನ್ನು ಎರಡು ಗೇಟ್ಗಳನ್ನು ಮೇಲೆತ್ತಲಾಗಿದೆ.