ಶಿವಮೊಗ್ಗ: ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ದಸರಾ ನವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ತೊಡಿಸಲಾಗಿದ್ದ 200 ಗ್ರಾಂ ತೂಕದ ₹20 ಲಕ್ಷ ಮೌಲ್ಯದ ಬಂಗಾರದ ಮುಖವಾಡ ಕಳ್ಳತನವಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 11 ರಂದು ದೇವಸ್ಥಾನದ ಆಂಜನೇಯ ಸ್ವಾಮಿ ದೇವರನ್ನು ಪಟ್ಟಕ್ಕೆ ಕೂರಿಸಿ, ಸುಮಾರು 200 ಗ್ರಾಂ ತೂಕದ ಬಂಗಾರದ ಮುಖವಾಡದಿಂದ ಅಲಂಕರಿಸಲಾಗಿತ್ತು. ಅಕ್ಟೋಬರ್ 14 ರಂದು ಬೆಳಿಗ್ಗೆ ದೇವಸ್ಥಾನದ ಅಧ್ಯಕ್ಷ ಶಾಂತರಾಜ್ ಅವರು ಪೂಜೆ ಮಾಡುವಾಗ ದೇವರಿಗೆ ಬಂಗಾರದ ಮುಖವಾಡ ಇರುವುದನ್ನು ಗಮನಿಸಿದ್ದರು.

ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಆಗಲಿದೆ ಎಂದು ದೇವಸ್ಥಾನದ ಬಾಗಿಲು ಹಾಕದೇ ತೆರೆದಿಡಲಾಗಿತ್ತು. ಸಂಜೆ ಅರ್ಚಕರು ಪೂಜೆಗೆ ಬಂದು ನೋಡಿದಾಗ, ದೇವರಿಗೆ ಅಲಂಕರಿಸಿದ್ದ ಬಂಗಾರದ ಮುಖವಾಡ ನಾಪತ್ತೆಯಾಗಿತ್ತು. ದೇವಸ್ಥಾನದಲ್ಲಿದ್ದ ಸುಮಾರು ₹20,00,000 ಮೌಲ್ಯದ 200 ಗ್ರಾಂ ತೂಕದ ಬಂಗಾರದ ಮುಖವಾಡ ಕಳ್ಳತನ ಮಾಡಿದ್ದಾರೆ ಎಂದು ದೇವಸ್ಥಾನದ ಅಧ್ಯಕ್ಷ ಶಾಂತರಾಜ್ ದೂರು ನೀಡಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.