SHIVAMOGGA LIVE NEWS | ELECTRICITY | 4 ಜೂನ್ 2022
ಆನವೇರಿ ಗ್ರಾಮದಲ್ಲಿ ಜೂನ್ 5 ರಿಂದ ಜೂನ್ 9ರವರೆಗೆ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.
ಮೆಸ್ಕಾಂ ಎಚ್ಚರಿಕೆ ಏನು?
ಈ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ಔತಣ ಕೂಟ ಏರ್ಪಡಿಸುವವರು, ವಿದ್ಯುತ್ ಲೈನ್, ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವವರು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್, ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ ಪೂರ್ವಾನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಮೆಸ್ಕಾಂ ವಿದ್ಯುತ್ ಜಾಲದಿಂದ ವಿದ್ಯುತ್‍ನ್ನು ಉಪಯೋಗಿಸಬಾರದು.
ಒಂದು ವೇಳೆ ಬಳಸಿದ್ದಲ್ಲಿ, ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ, ಜೀವ ಹಾನಿಯಂತಹ ಘಟನೆಗಳು ಸಂಭವಿಸಿದಲ್ಲಿ ಮೆಸ್ಕಾಂ ಹೊಣೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಸುವವರ ವಿರುದ್ಧ ವಿದ್ಯುತ್ ದುರ್ಬಳಕೆ, ಕಳ್ಳತನ ಪ್ರಕರಣ ದಾಖಲಿಸಿ, ವಿದ್ಯುಚ್ಛಕ್ತಿ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೊಳೆಹೊನ್ನೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂನಿಜಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – 24 ವರ್ಷದ ಬಳಿಕ ಜಾತ್ರೆ, ಸಿದ್ಧತೆ ಕುರಿತು ಮಹತ್ವದ ಸಭೆ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200