ಆನೆಯ ಸಿಟ್ಟು, ಮಾವುತನನ್ನು ಅಟ್ಟಾಡಿಸಿದ ವಿಡಿಯೋ ವೈರಲ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಸಕ್ರೆಬೈಲಿನ (SAKREBYLE) ಸಾಕಾನೆಯೊಂದು ಬಿಡಾರದಿಂದ ಕಾಡಿಗೆ ಹೋಗುವಾಗ ತನ್ನ ಮಾವುತನ ಮೇಲೆ ಮುನಿಸಿಕೊಂಡು (ANGRY ELEPHANT), ಬೆನ್ನಿತ್ತಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Shimoga Nanjappa Hospital

ಶುಕ್ರವಾರ ಘಟನೆ ಸಂಭವಿಸಿದೆ. ಸಕ್ರೆಬೈಲು ಬಿಡಾರದ ಮಣಿಕಂಠ ಆನೆ ತನ್ನ ಮಾವುತ ಖಲೀಲ್ ಅವರ ಮೇಲೆ ದಾಳಿಗೆ ಮುಂದಾಗಿದೆ. ಆನೆಯ ಮುನಿಸಿನ ಬಗ್ಗೆ ತಿಳಿದ ಖಲೀಲ್ ಅವರು ಓಡಲು ಯತ್ನಿಸಿದ್ದಾರೆ. ಆನೆ ಅವರನ್ನು ಬೆನ್ನಟ್ಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ವಿಡಿಯೋದಲ್ಲಿ ಏನಿದೆ?

ಮಣಿಕಂಠ ಆನೆಯನ್ನು(ANGRY ELEPHANT) ಬಿಡಾರದಿಂದ ಕಾಡಿಗೆ ಕರೆದೊಯ್ಯಲಾಗುತ್ತಿತ್ತು. ಕಾವಾಡಿ ಇಮ್ರಾನ್ ಆನೆಯ ಮೇಲೆ ಕುಳಿತಿದ್ದರು. ಬಿಡಾರದ ಮುಂದೆ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಆನೆ ದಾಟುತ್ತಿತ್ತು. ಮಾವುತ ಖಲೀಲ್ ಅವರು ಬೈಕಿನಲ್ಲಿ ಆನೆಯ ಹಿಂದೆ ಸಾಗುತ್ತಿದ್ದರು. ಖಲೀಲ್ ಅವರು ಬರುತ್ತಿರುವುದನ್ನು ಗಮನಿಸಿದ ಮಣಿಕಂಠ ಆನೆ ಏಕಾಏಕಿ ಅವರತ್ತ ತಿರುಗಿ ನಿಲ್ಲುತ್ತದೆ.

ಮಣಿಕಂಠ ಆನೆಯ ಸಿಟ್ಟು ಗಮನಿಸಿದ ಖಲೀಲ್ ಅವರು ಬೈಕ್ ಬಿಟ್ಟು ಓಡುತ್ತಾರೆ. ಆನೆಯು ಅವರನ್ನು ಬೆನ್ನಟ್ಟುತ್ತದೆ. ಖಲೀಲ್ ಅವರು ಬಿಡಾರದ ಕಡೆಯಿಂದ ಜಂಗಲ್ ರೆಸಾರ್ಟ್ ಕಡೆಗೆ ಓಡುತ್ತಾರೆ. ಆನೆ ಅವರನ್ನು ಓಡಿಸಿಕೊಂಡು ಹೋಗುತ್ತದೆ.

ಕಾರಿನಲ್ಲಿದ್ದವರಿಗೆ ಢವಢವ

ಇತ್ತ ಆನೆ ಬಿಡಾರದ ಮುಂದೆ ಕಾರಿನಲ್ಲಿದ್ದ ಕುಟುಂಬದವರು ಆನೆ ಮಾವುತನನ್ನು ಬೆನ್ನಟ್ಟಿದ್ದನ್ನು ಕಂಡು ಆತಂಕಕ್ಕಿಡಾಗಿದ್ದಾರೆ. ಖಲೀಲ್ ಅವರು ಬೈಕ್ ಬಿಟ್ಟು ಓಡುವುದನ್ನು ಗಮನಿಸಿ ಕಾರಿನಲ್ಲಿದ್ದ ಮಹಿಳೆ ಬಾಗಿಲು ತೆಗೆದು ಕೆಳಗಿಳಿಯಲು ಮುಂದಾಗುತ್ತಾರೆ. ಅದರೆ ಆನೆ ಓಡಿ ಬಂದಿದ್ದನ್ನು ಗಮನಿಸಿ ಆತಂಕದಿಂದ ಕಾರಿನೊಳಗೆ ಕುಳಿತು ಬಾಗಿಲು ಹಾಕಿಕೊಳ್ಳುತ್ತಾರೆ.

ಮಣಿಕಂಠನ ಸಿಟ್ಟು ಇದೆ ಮೊದಲಲ್ಲ

ಮಾವುತ ಖಲೀಲ್ ಅವರನ್ನ ಬೆನ್ನಟ್ಟಿದ ಮಣಿಕಂಠನನ್ನು ಇತರೆ ಆನೆಗಳ ಸಹಾಯದಿಂದ ಕಟ್ಟಿ ಹಾಕಲಾಗಿದೆ. ಮಣಿಕಂಠ ಆನೆ ಈ ಹಿಂದೆ ತುಂಗಾ ಹೊಳೆಯಲ್ಲಿ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿಗೆ ಮುಂದಾಗಿತ್ತು. ಬಿಡಾರದಲ್ಲಿಯು ಇತರೆ ಆನೆಗಳ ಜೊತೆ ಜಗಳ ಸಾಮಾನ್ಯವಾಗಿದೆ.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ಸಿಗಂದೂರು ಲಾಂಚ್ ಅನಿರ್ದಿಷ್ಟಾವಧಿಗೆ ತಡೆದು ಪ್ರತಿಭಟಿಸುವ ಎಚ್ಚರಿಕೆ, ಕಾರಣವೇನು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment