NEWS HIGHLIGHTS
ಶಿವಮೊಗ್ಗ: ಆಯನೂರು ಗ್ರಾಮದ ಪೆಟ್ರೋಲ್ ಬಂಕ್ ಎದುರಿನ ಸರ್ಕಲ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಯೋಗೇಶ್ (32) ಗಾಯಗೊಂಡಿದ್ದಾರೆ.
ಆಯನೂರು ಕೋಟೆ ಗ್ರಾಮದ ಯೋಗೇಶ್ ತಮ್ಮ ಬೈಕ್‌ನಲ್ಲಿ ಶಿವಮೊಗ್ಗದಿಂದ ಆಯನೂರು ಕಡೆಗೆ ರಸ್ತೆಯ ಎಡಭಾಗದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹಣಗೆರೆಕಟ್ಟೆ ರಸ್ತೆಯಿಂದ ಬಂದ ಸ್ವಿಫ್ಟ್ ಡಿಸೈರ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯೋಗೇಶ್ ಬೈಕಿನಿಂದ ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ಯೋಗೇಶ್ ಎರಡೂ ಕಾಲುಗಳ ಮಂಡಿಗೆ ಒಳಪೆಟ್ಟಾಗಿದೆ. ಕೂಡಲೆ ಗಾಯಾಳುವನ್ನು ಆಯನೂರಿನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ರೈತನ ಮನೆ ಮುಂಭಾಗ ಇದ್ದ ರೋಟೋವೇಟರ್ ನಾಪತ್ತೆ