ಅಬ್ಬಲಗೆರೆ ಸಮೀಪ ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 4 NOVEMBER 2023

SHIMOGA : ಚಲಿಸುತ್ತಿದ್ದ ಬೈಕ್‌ಗೆ (BIKE) ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು ಓರ್ವ ಸವಾರನಿಗೆ ಗಾಯವಾಗಿದೆ. ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನೀಡಿದ್ದ ಕಾರು ಚಾಲಕ ಕೊನೆಗೆ ಮಾತು ತಪ್ಪಿದ್ದಾನೆ ಎಂದು ಆರೋಪಿಸಿ ಗಾಯಾಳು ದೂರು ನೀಡಿದ್ದಾರೆ.

ಅಬ್ಬಲಗೆರೆ ಸಮೀಪದ ಕೆರೆ ಬಳಿ ಘಟನೆ ಸಂಭವಿಸಿದೆ. ಆಶ್ರಯ ಬಡಾವಣೆಯ ಮಂಜಪ್ಪ ಎಂಬುವವರು ಬೀರನಕೆರೆಯಿಂದ ಶಿವಮೊಗ್ಗ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದು ಬೈಕ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಂಜಪ್ಪ ಅವರ ಕಾಲು, ಮಂಡಿ, ಹಣೆ, ತುಟಿ, ಎಡಗೈಗೆ ಗಾಯವಾಗಿದೆ.

ಡಿಕ್ಕಿ ಹೊಡೆಸಿದ ಕಾರು ಚಾಲಕನೆ ಮಂಜಪ್ಪ ಅವರನ್ನು ಚಂದ್ರಗಿರಿ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನೀಡಿದ್ದ. ಆದರೆ ಮಾತು ತಪ್ಪಿದ ಹಿನ್ನೆಲೆ ಕಾರು ಚಾಲಕ ಶಿವಪ್ರಕಾಶ್‌ ಎಂಬಾತನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ – ಗುಡ್ಡೇಕಲ್‌ ದೇಗುಲದ ಬಳಿ ಬಸ್‌ ಸೀಟ್‌ಗಾಗಿ 9 ವರ್ಷದ ಬಾಲಕಿ, ತಂದೆ ಮೇಲೆ ಹಲ್ಲೆ, ಏನಿದು ಕೇಸ್‌?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment