ಶಿವಮೊಗ್ಗ ಲೈವ್.ಕಾಂ | HOLEHONNUR NEWS | 28 ನವೆಂಬರ್ 2021
ಪುಣ್ಯ ಸ್ನಾನಕ್ಕೆ ಹೆಸರಾದ ಕೂಡಲಿಯಲ್ಲಿ ಮೊಸಳೆ ಆತಂಕ ಶುರುವಾಗಿದೆ. ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಮೊಳಸೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊಳೆ ದಂಡೆ ಮೇಲೆ ಮೊಸಳೆಯೊಂದು ಬಹುಹೊತ್ತು ಕುಳಿತಿತ್ತು. ಸ್ಥಳೀಯರು ಇದರ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ.
ಮಳೆ ಮತ್ತು ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಮೊಸಳೆಗಳು ನೀರಿನ ಜೊತೆಗೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೂಡಲಿ ಸುತ್ತಮುತ್ತ ಹೊಳೆ ದಂಡೆ ಮೇಲಿರುವ ಹಲವು ಗ್ರಾಮಸ್ಥರಲ್ಲಿ ಮೊಸಳೆಗಳು ಆತಂಕ ಮೂಡಿಸಿವೆ.
ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆ ಕೂಡಲಿಯಲ್ಲಿ ಪುಣ್ಯ ಸ್ನಾನಕ್ಕೆ ಬರುವವರು, ಮೀನುಗಾರಿಕೆ, ದನಗಳ ಮೈ ತೊಳೆಯುವುದು, ವಾಹನಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯಲು ಬರುವವರು ಹೊಳೆಗೆ ಇಳಿಯುವಾಗ ಮುನ್ನೆಚ್ಚರಿಕೆ ವಹಿಸಬೇಕಿದೆ.