ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 APRIL 2023
SHIMOGA : ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು 50 ಸಾವಿರ ರೂ. ಕಳೆದುಕೊಂಡಿದ್ದಾರೆ. ಕೇವಲ 459 ರೂ.ಗೆ ಒನ್ ಪ್ಲಸ್ (ONE PLUS) ಮೊಬೈಲ್ ಖರೀದಿಸಿ ಎಂಬ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ಬಳಿಕ ಹಣ ಕಳೆದುಕೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ಎಲೆಕ್ಟ್ರಿಷಿಯನ್ ಫೇಸ್‌ಬುಕ್ ನೋಡುತ್ತಿದ್ದಾಗ ಒನ್ ಪ್ಲಸ್ (ONE PLUS) ಮೊಬೈಲ್ ಫೋನ್ ಕೇವಲ 459 ರೂ. ಎಂದು ಜಾಹೀರಾತು ಕಾಣಿಸಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆ ವಿವರ ದಾಖಲಿಸುವಂತೆ ಸೂಚಿಸಿತ್ತು. ಅಂತೆಯೇ ಬ್ಯಾಂಕ್ ವಿವರ ದಾಖಲು ಮಾಡಿದ್ದರು. ಅಷ್ಟು ಹೊತ್ತಿಗೆ ಎಲೆಕ್ಟ್ರಿಷಿಯನ್ ಅವರ ಮಗ ಇದನ್ನು ಗಮನಿಸಿ ನಕಲಿ ಜಾಹೀರಾತು ಎಂದು ತಿಳಿಸಿದ್ದರಿಂದ ಮತ್ತಷ್ಟು ವಿವರ ದಾಖಲಿಸಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹೆಂಡತಿ ಜೊತೆ ಲಾಡ್ಜ್‌ಗೆ ಬಂದ ವ್ಯಕ್ತಿ, ಬಾತ್ ರೂಂಗೆ ಹೋಗಿ ಹೊರ ಬಂದಾಗ ಕಾದಿತ್ತು ಶಾಕ್
ರಾತ್ರಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ 50,300 ರೂ. ಹಣ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ನಕಲಿ ಜಾಹೀರಾತು ಪ್ರಕಟಿಸಿ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲೆಕ್ಟ್ರಿಷಿಯನ್ ದೂರು ನೀಡಿದ್ದಾರೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.