ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

Published On : ಮಾರ್ಚ್ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಹುಲಿಗಣತಿಗಾಗಿ ಅಳವಡಿಸಲಾಗಿದ್ದ ಎರಡು ಅತ್ಯಾಧುನಿಕ ಕ್ಯಾಮರಾಗಳು ಕಳ್ಳತನವಾಗಿವೆ (cameras stolen). ಅಖಿಲ ಭಾರತ ರಾಷ್ಟ್ರೀಯ ಹುಲಿಗಣತಿ 2026ರ ಕಾರ್ಯಾಚರಣೆಯ ಅಂಗವಾಗಿ ಈ ಕ್ಯಾಮರಾಗಳನ್ನು ಸಕ್ರೆಬೈಲ್ ವನ್ಯಜೀವಿ ವಲಯದ ವಿವಿಧೆಡೆ ಅಳವಡಿಸಲಾಗಿತ್ತು. ಕಳುವಾದ ಈ ಎರಡು ಕಡ್ಡಿಬ್ಯಾಕ್ ಕಂಪನಿಯ ಕ್ಯಾಮರಾಗಳ ಮೌಲ್ಯ ₹50,000 ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ – ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಮಾರ್ಚ್ 21ರ ಮಧ್ಯಾಹ್ನ ಉಪ ವಲಯ ಅರಣ್ಯಾಧಿಕಾರಿ ಸತೀಶ್ ಅವರು ಭೇಟಿ ನೀಡಿದ್ದಾಗ ಶಾಂತಣ್ಣ ಕೆರೆ ಸಮೀಪ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ ಜಾಗದಲ್ಲಿಯೇ ಈ ಕ್ಯಾಮರಾಗಳು ಇದ್ದವು. ಮಾರ್ಚ್ 22ರಂದು ಬೆಳಗ್ಗೆ ಸಿಬ್ಬಂದಿ ಪರಿಶೀಲಿಸಿದಾಗ ಕ್ಯಾಮರಾಗಳು ನಾಪತ್ತೆಯಾಗಿದ್ದವು. ಅಪರಿಚಿತರು ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tunga-Nagara-Police-Station-Shimoga.avif

ಸಕ್ರೆಬೈಲ್ ವಲಯ ಅರಣ್ಯಾಧಿಕಾರಿ ವಿನಯ್.ಜಿ.ಆರ್ ಈ ಕುರಿತು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 28, 2026

Leave a Comment