ಕಾಂಪೌಂಡ್‌ ಬಳಿ ಕಪ್ಪು ಬಣ್ಣದ ಪೊಟ್ಟಣಗಳು ಪ್ರತ್ಯಕ್ಷ, ತೆರೆದು ನೋಡಿದ ಭದ್ರತಾ ಸಿಬ್ಬಂದಿಗೆ ಕಾದಿತ್ತು ಆಘಾತ

ಶಿವಮೊಗ್ಗ: ಸಂಟ್ರಲ್ ಜೈಲು ಒಳಗಡೆ ಎಸೆಯಲು ಕಾಂಪೌಂಡ್ ಬಳಿ ತಂದು ಇಡಲಾಗಿದ್ದ ಮೊಬೈಲ್‌ಗಳು ಹಾಗೂ ಸಿಗರೇಟ್ ಸೇರಿ ಹಲವು ನಿಷೇಧಿತ ವಸ್ತುಗಳನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕಾರಾಗೃಹದ ಹೊರಭಾಗದಲ್ಲಿ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಏರಿಯಾ ಡೊಮಿನೇಷನ್ ಗಸ್ತು ನಡೆಸಿದರು. ಈ ವೇಳೆ ಹೊಸ ಕಾರಾಗೃಹ ನಿರ್ಮಾಣ ಸ್ಥಳದ ಬಲಭಾಗದ ಕಾಂಪೌಂಡ್ ಬಳಿ, ಕಪ್ಪು ಬಣ್ಣದ ಟೇಪ್‌ನಿಂದ ಸುತ್ತಿದ ಎರಡು ಪೊಟ್ಟಣಗಳು ಕಂಡುಬಂದಿದ್ದವು. ಅವುಗಳನ್ನು ತೆರೆದು ಪರಿಶೀಲಿಸಿದಾಗ 1 ಆಂಡ್ರಾಯ್ಡ್ ಮೊಬೈಲ್, 4 ಬೇಸಿಕ್ ಮೊಬೈಲ್, 6 ಬ್ಯಾಟರಿಗಳು, 1 ಚಾರ್ಜರ್, ಹೆಡ್‌ಫೋನ್, ಸಿಗರೇಟ್ ಮತ್ತು ಬೀಡಿ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.

Shimoga-Central-Jail-Front-General-Image

ಕೈದಿಗಳಿಗೆ ತಲುಪಿಸುವ ಉದ್ದೇಶದಿಂದ ದುಷ್ಕರ್ಮಿಗಳು ಈ ವಸ್ತುಗಳನ್ನು ಕಾಂಪೌಂಡ್ ಬಳಿ ತಂದು ಇಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಜೈಲು ಸಿಬ್ಬಂದಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.