SHIVAMOGGA LIVE NEWS | 14 AUGUST 2023
AYANURU : ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Centre) ಶಾಸಕಿ ಶಾರದಾ ಪೂರ್ಯಾನಾಯ್ಕ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಹಲವು ನ್ಯೂನತೆಗಳ ಕುರಿತು ತಿಳಿಸಿದರು.
ಇದನ್ನೂ ಓದಿ – ಪಂಜರ ಸೇರಿತು ಶಿವಮೊಗ್ಗಕ್ಕೆ ಆಗಮಿಸಿದ್ದ ಟಿ-55 ಯುದ್ಧ ಟ್ಯಾಂಕರ್
![]() |
ಸ್ಥಳೀಯರು ಏನೆಲ್ಲ ದೂರು ಹೇಳಿದರು?
ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Centre) ಸುತ್ತಮುತ್ತಲ ಗ್ರಾಮದ ಜನರು ಬರುತ್ತಾರೆ. ಉತ್ತಮ ವೈದ್ಯರಿದ್ದಾರೆ. ಆದರೆ ಸಂಜೆ ಮತ್ತು ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ಶನಿವಾರ ಮತ್ತು ಭಾನುವಾರದಂದು ವೈದ್ಯರು ಬರುವುದಿಲ್ಲ. ಆದ್ದರಿಂದ 24 ಗಂಟೆಯು ಇಲ್ಲಿ ವೈದ್ಯರು ಇರುವಂತೆ ವ್ಯವಸ್ಥೆ ಮಾಡಬೇಕಿದೆ.
ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದರು ಇಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಬರೆದುಕೊಡುವ ಬಹತೇಕ ಔಷಧಗಳನ್ನು ಹೊರಗೆ ಖರೀದಿಸಬೇಕಿದೆ. ಇನ್ನು , ಇಲ್ಲಿ ಸುರಕ್ಷಾ ಸಮಿತಿ ಇಲ್ಲ.
ವೈದ್ಯಾಧಿಕಾರಿ ಹೇಳಿದ್ದೇನು?
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕಿ ಶಾರದಾ ಪೂರ್ಯಾನಾಯ್ಕ್ ವೈದ್ಯಾಧಿಕಾರಿ ಡಾ. ಶಿಲ್ಪಾ ಅವರಿಂದ ಮಾಹಿತಿ ಪಡೆದರು. ಸರ್ಕಾರ ಒದಗಿಸುವ ಎಲ್ಲ ಔಷಧಗಳು, ಮಾತ್ರೆಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ವೈದ್ಯರು ಬೆಳಗ್ಗೆ 9 ರಿಂದ ಸಂಜೆ 4.30ರವರೆಗೆ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರಲಿದ್ದಾರೆ. ಮಕ್ಕಳು ಡಾಕ್ಟರ್ ಒಬ್ಬರೆ ಇದ್ದಾರೆ. ಅವರೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಇರಬೇಕು ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಅಧಿಕಾರಿಗೆ ಲೋಕಾಯುಕ್ತ ಹೆಸರಿನಲ್ಲಿ ಫೋನ್, 1 ಲಕ್ಷ ರೂ. ಹಣಕ್ಕೆ ಡಿಮಾಂಡ್, ಮುಂದೇನಾಯ್ತು?
ಎಂಎಲ್‌ಎ ಏನಂದ್ರು?
ಬಳಿಕ ಮಾತನಾಡಿದ ಶಾಸಕ ಶಾರದಾ ಪೂರ್ಯಾನಾಯ್ಕ್, ಹೊಳೆಹೊನ್ನೂರಿನಲ್ಲಿ ಸಂಜೆಯು ಒಪಿಡಿ ತೆಗೆದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಲ್ಲಿ ತುಂಬಾ ಸಮಸ್ಯೆಗಳಿವೆ. ಆದಷ್ಟು ಬೇಗೆ ಎಲ್ಲವು ಪರಿಹಾರವಾಗಬೇಕು. ಅಗತ್ಯವಿರುವ ಔಷಧವನ್ನು ಕೂಡಲೆ ತರಿಸಿಕೊಂಡು ಜನರಿಗೆ ಸಮಸ್ಯೆ ಆಗದೆ ಆಗ ನೋಡಿಕೊಳ್ಳಿ ಎಂದು ವೈದ್ಯರಿಗೆ ಸೂಚನೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200