SHIVAMOGGA LIVE NEWS, 19 DECEMBER 2024
ಶಿವಮೊಗ್ಗ : ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ (Raid) ನಡೆಸಿ 4 ಜೆಸಿಬಿ, ಎರಡು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯ ಭೂ ವಿಜ್ಞಾನಿಗಳ ಆದೇಶದ ಮೇಲೆ ಇಲಾಖೆಯ ಜಾಗೃತ ದಳದಿಂದ ದಾಳಿ ನಡೆಸಲಾಗಿದೆ.
ಶಿವಮೊಗ್ಗ ತಾಲೂಕಿನ ಸಿದ್ದರಹಳ್ಳಿ – ಕುಸ್ಕೂರಿ ನಲ್ಲಿ ಒಂದು ಜೆಸಿಬಿ, ಹೊಳೆಹಟ್ಟಿಯಲ್ಲಿ 3 ಜೆಸಿಬಿ, ಹಿಟ್ಟೂರು ಹಾಗೂ ಸಿರಿಗೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ತಲಾ ಒಂದೊಂದು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ಭೂ ವಿಜ್ಞಾನಿ ಪ್ರಿಯಾ ದೊಡ್ಡಗೌಡ್ರ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು.
ಇದನ್ನೂ ಓದಿ » ಆಗುಂಬೆ ಸಮೀಪ ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ