ಕ್ಷೇತ್ರ ಪರಿಚಯ | ಶಿವಮೊಗ್ಗ ಗ್ರಾಮಾಂತರ – 2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು ನಿರ್ಧಾರವಾಗಿತ್ತು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 DECEMBER 2022

ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಜಿಲ್ಲೆಯ ಹೊಸ ವಿಧಾನಸಭೆ ಕ್ಷೇತ್ರವಾಗಿದೆ. ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಈ ಕ್ಷೇತ್ರವನ್ನು ರಚಿಸಲಾಗಿದೆ. ಅಲ್ಲದೆ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. (Shimoga Rural Legislative Assembly)

ಈವರೆಗು ಮೂರು ಚುನಾವಣೆಗಳನ್ನು ಕ್ಷೇತ್ರ ಕಂಡಿದೆ. ಈ ಪೈಕಿ ಎರಡು ಬಾರಿ ಬಿಜೆಪಿ, ಒಮ್ಮೆ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಖಾತೆ ತೆರೆಯುವ ಹವಣಿಕೆಯಲ್ಲಿದೆ.

ಹೊಳೆಹೊನ್ನೂರು ಕ್ಷೇತ್ರವಾಗಿತ್ತು

Kshetra-Parichaya-Logo

2008ಕ್ಕು ಮೊದಲು ಇದು ಹೊಳೆಹೊನ್ನೂರು ವಿಧಾನಸಭೆ ಕ್ಷೇತ್ರವಾಗಿತ್ತು. ಇಲ್ಲಿ ಪಕ್ಷಕ್ಕಿಂತಲು ವ್ಯಕ್ತಿಯ ವರ್ಚಿಸ್ಸಿನ ಆಧಾರದ ಮೇಲೆ ಜನರು ಆರಿಸಿ ಕಳುಹಿಸುತ್ತಿದ್ದರು. 1978ರಲ್ಲಿ ಜಿ.ಬಸವಣ್ಯಪ್ಪ (ಕಾಂಗ್ರೆಸ್ ಐ), 1983ರಲ್ಲಿ ಜಿ.ಬಸವಣ್ಯಪ್ಪ (ಜನತಾ ಪಕ್ಷ), 1985ರಲ್ಲಿ ಬಸವಣ್ಯಪ್ಪ (ಜನತಾ ಪಕ್ಷ), 1989ರಲ್ಲಿ ಕರಿಯಣ್ಣ (ಕಾಂಗ್ರೆಸ್), ಜಿ.ಬಸವಣ್ಯಪ್ಪ (ಜನತಾ ದಳ), 1999ರಲ್ಲಿ ಕರಿಯಣ್ಣ (ಕಾಂಗ್ರೆಸ್) ಗೆಲುವು ಸಾಧಿಸಿದ್ದರು.

ಅತಿ ಹೆಚ್ಚು ಅವಧಿ ಆಯ್ಕೆಯಾಗಿದ್ದ ಜಿ.ಬಸವಣ್ಯಪ್ಪ ಅವರು ಸಚಿವರಾಗಿಯು ಜವಾಬ್ದಾರಿ ನಿಭಾಯಿಸಿದ್ದರು.

Shimoga Rural Legislative Assembly

2008ರಲ್ಲಿ ಪುನರ್ ವಿಂಗಡಣೆ

2008ರ ಬಳಿಕ ಹೊಳೆಹೊನ್ನರು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ರಚಿಸಲಾಯಿತು. ಹಲವು ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಬಂತು. ಆ ಬಳಿಕ ನಡೆದ ಮೂರು ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಮಧ್ಯೆ ಜೆಡಿಎಸ್ ಕೂಡ ಪೈಪೋಟಿ ಒಡ್ಡಿದೆ.

Shimoga Nanjappa Hospital

2008ರಲ್ಲಿ ಕೆ.ಜಿ.ಕುಮಾರಸ್ವಾಮಿ (ಬಿಜೆಪಿ), 2013ರಲ್ಲಿ ಶಾರದಾ ಪೂರ್ಯಾನಾಯ್ಕ್ (ಜೆಡಿಎಸ್), 2018ರಲ್ಲಿ ಅಶೋಕ್ ನಾಯ್ಕ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.

Shimoga Rural Legislative Assembly

2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು

2018ರ ಚುನಾವಣೆ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಮೂರು ಪಕ್ಷಗಳು ಅತ್ಯಂತ ಬಿರುಸಾಗಿ ಪ್ರಚಾರ ಕೈಗೊಂಡಿದ್ದವು. ಅಂತಿಮವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶದಲ್ಲಿ ಬಿಜೆಪಿಯ ಕೆ.ಬಿ.ಅಶೋಕ್ ನಾಯ್ಕ್ ಅವರು ಜೆಡಿಎಸ್ ಪಕ್ಷದ ಶಾರದಾ ಪೂರ್ಯಾನಾಯ್ಕ್ ಅವರಿಗಿಂತಲು ಶೇ.2.27ರಷ್ಟು ಹೆಚ್ಚಿಗೆ ಮತ ಪಡೆದು ಗೆಲುವು ಸಾಧಿಸಿದ್ದರು.

Shimoga Rural Legislative Assembly

2018 ಚುನಾವಣೆ ಫಲಿತಾಂಶ

ಅಭ್ಯರ್ಥಿಪಡೆದ ಮತ
ಕೆ.ಬಿ.ಅಶೋಕ್ ನಾಯ್ಕ್69,326
ಶಾರದಾ ಪೂರ್ಯನಾಯ್ಕ್65,549
ಗೆಲುವಿನ ಅಂತರ3777

 2018ರ ಮತದಾರರ ವಿವರ

ಒಟ್ಟು ಮತದಾರರು211546
ಚಲಾವಣೆಯಾದ ಮತ172362
ಮತದಾನ ಪ್ರಮಾಣಶೇ.81.48

ಟಿಕೆಟ್ ಗಾಗಿ ಜಿದ್ದಾಜಿದ್ದಿ

ಮೀಸಲು ಕ್ಷೇತ್ರ ಆಗಿರುವುದರಿಂದ ಪರಿಶಿಷ್ಟ ಜಾತಿ ನಾಯಕರು ಇಲ್ಲಿಂದ ಸ್ಪರ್ಧೆಗೆ ತೀವ್ರ ಜಿದ್ದಾಜಿದ್ದಿಗೆ ಇಳಿದಿದ್ದಾರೆ. ಈಗಾಗಲೆ ಜೆಡಿಎಸ್ ಪಕ್ಷದಿಂದ ಶಾರದಾ ಪೂರ್ಯನಾಯ್ಕ್ ಅವರ ಸ್ಪರ್ಧೆ ಖಚಿತವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಈಗಾಗಲೆ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯಿಂದ ಕೆ.ಬಿ.ಅಶೋಕ್ ನಾಯ್ಕ್ ಅವರೆ ಪುನಃ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಲವರು ಅರ್ಜಿ ಸಲ್ಲಸಿದ್ದಾರೆ. ವಿಶೇಷ ಅಂದರೆ ಹೊರ ಜಿಲ್ಲೆಯವರು ಇಲ್ಲಿ ಸ್ಪರ್ಧೆಗೆ ಅರ್ಜಿ ಸಲ್ಲಿಸಿ, ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

KB Ashok Naik Shimoga Rural MLA

ಜಾತಿವಾರು ಬಲಾಬಲ ಹೇಗಿದೆ?

ಮೀಸಲು ಕ್ಷೇತ್ರವಾದರು ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಪರಿಶಿಷ್ಟ ಜಾತಿ, ಪಂಗಡದ ಮತದಾರರು ನಿರ್ಣಾಯಕರಾಗಿದ್ದಾರೆ. ಉಳಿದಂತೆ ಬ್ರಾಹ್ಮಣ, ಒಕ್ಕಲಿಗ, ಕುರುಬ, ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಕಡಿಮೆ ಪ್ರಮಾಣದಲ್ಲಿ ಇದ್ದರು ಈಡಿಗ ಸಮುದಾಯದ ಮತಗಳು ಸೋಲು, ಗೆಲುವು ನಿರ್ಧರಿಸುವಷ್ಟಿದೆ.

Sharadha Puryanaik Shimoga Rural MLA

ಶಿವಮೊಗ್ಗ ಜಿಲ್ಲೆಯ ಹೊಸ ವಿಧಾನ ಸಭೆ ಕ್ಷೇತ್ರ ಇದು. ಅಲ್ಲದೆ ಏಕೈಕ ಮೀಸಲು ಕ್ಷೇತ್ರವಾಗಿದೆ. ಹಾಗಾಗಿ ಈ ಕ್ಷೇತ್ರದ ಕುರಿತು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ತೀವ್ರ ಕುತೂಹಲವಿದೆ.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 7, 2022

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment