ಮದುವೆ ಆಗು ಅಂತಾ ಕಾಲೇಜು ವಿದ್ಯಾರ್ಥಿನಿಯನ್ನು ಎಳೆದಾಡಿದ ಯುವಕ, ದಾಖಲಾಯ್ತು ಪ್ರಕರಣ

ಶಿವಮೊಗ್ಗ: ಕಾಲೇಜಿಗೆ ಹೋಗುವಾಗ ಹಿಂಬಾಲಿಸಿ, ಚುಡಾಯಿಸಿ (stalking), ಮದುವೆ ಆಗುವಂತೆ ಬಲವಂತಪಡಿಸಿ ಜೀವ ಬೆದರಿಕೆ ಹಾಕುತ್ತಿದ್ದ ಯುವಕನ ವಿರುದ್ಧ ಯುವತಿ ದೂರು ನೀಡಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ : ಮಹಿಳಾ ಡಾಕ್ಟರ್‌ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು

Shivamogga-Rural-Police-Station

ನಾಲ್ಕು ತಿಂಗಳಿನಿಂದ ಕಿರುಕುಳ

ಪದವಿ ವಿದ್ಯಾರ್ಥಿನಿಯನ್ನು (ಹೆಸರು, ಊರು ಗೌಪ್ಯ) ಆರೋಪಿಯು ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹಿಂಬಾಲಿಸುತ್ತಿದ್ದ. ಕಾಲೇಜಿಗೆ ಹೋದಾಗ ಅಲ್ಲಿಯೂ ಬಂದು ತೊಂದರೆ ನೀಡುತ್ತಿದ್ದ. ರಾತ್ರಿ ಸಮಯದಲ್ಲಿ ಯುವತಿಯ ಮನೆಯ ಕಿಟಕಿ ಹಾಗೂ ಬಾಗಿಲು ತಟ್ಟಿ ಕಿರುಕುಳ ನೀಡುತ್ತಿದ್ದ. ಮದುವೆಯಾಗುವಂತೆ ಒತ್ತಾಯಿಸಿ, ನಿರಾಕರಿಸಿದರೆ ಕೊಲೆ ಮಾಡುವುದಾಗಿ ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆ ಹಾಕುತ್ತಿದ್ದನು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

Shivamogga-Rural-Police-Station

ಎಳೆದಾಡಿ ಹಲ್ಲೆ ನಡೆಸಿದ

ಕೆಲ ದಿನದ ಹಿಂದೆ ಆರೋಪಿಯು, ಯುವತಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಸಂಬಂಧಿಕರು ಆಕೆಯನ್ನು ರಕ್ಷಿಸಿ ಮನೆಗೆ ಕರೆದೊಯ್ದಿದ್ದಾರೆ. ಘಟನೆ ಸಂಬಂಧ ಯುವತಿಯು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ 

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment