ಅಬ್ಬಲಗೆರೆಯ ಬಾರ್‌ನ ಬಾಗಿಲು ತೆಗೆಯಲು ಬಂದ ಕ್ಯಾಶಿಯರ್‌ಗೆ ಬೆಳಗ್ಗೆ ಕಾದಿತ್ತು ಶಾಕ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MARCH 2024

SHIMOGA : ಬಾರ್‌ ಅಂಡ್‌ ರೆಸ್ಟೋರೆಂಟ್‌ನ ಗೋಡೆಗೆ ಕನ್ನ ಕೊರೆದು ಕ್ಯಾಶ್‌ ಬಾಕ್ಸ್‌ನಲ್ಲಿದ್ದ ನಗದು ಮತ್ತು ವಿವಿಧ ಬ್ರ್ಯಾಂಡ್‌ನ ಮದ್ಯ ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಕ್ಯಾಶಿಯರ್‌ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಅಬ್ಬಲಗೆರೆಯಲ್ಲಿರುವ ದುರ್ಗ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಮಾ.4ರಂದು ರಾತ್ರಿ 11 ಗಂಟೆಗೆ ವ್ಯವಹಾರ ಮುಗಿಸಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಬಂದ್‌ ಮಾಡಲಾಗಿತ್ತು. ಮರುದಿನ ಬೆಳಗ್ಗೆ ಬಂದ ಕನ್ನ ಕೊರೆದಿರುವುದು ಗಮನಕ್ಕೆ ಬಂದಿತ್ತು.

ಇದನ್ನೂ ಓದಿ – ಶಿವಮೊಗ್ಗ ಟೋಲ್‌, ದಾಖಲೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ, ಏನದು ದಾಖಲೆ?

ಪರಿಶೀಲನೆ ನಡೆಸಿದಾಗ ಕ್ಯಾಶ್‌ ಬಾಕ್ಸ್‌ನಲ್ಲಿದ್ದ 75 ಸಾವಿರ ರೂ. ನಗದು, 74,300 ರೂ. ಮೌಲ್ಯದ ವಿವಿಧ ಮದ್ಯ ಕಳ್ಳತನವಾಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 7, 2024

Leave a Comment