ಶಿವಮೊಗ್ಗ: ತ್ಯಾವರೆಕೊಪ್ಪದಹುಲಿ ಮತ್ತು ಸಿಂಹಧಾಮದಲ್ಲಿದ್ದ ದಶಮಿ ಎಂಬ ಹೆಣ್ಣು ಹುಲಿ ಭಾನುವಾರ ಕೊನೆಯುಸಿರೆಳೆದಿದೆ ಎಂದು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎಂ.ಅಮರಾಕ್ಷರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಯೋಸಹಜ ಬಹು ಅಂಗಾಂಗ ವೈಫಲ್ಯದಿಂದ ದಶಮಿ ಹುಲಿಯು ಸೆಪ್ಟೆಂಬರ್ 6ರ ಬೆಳಿಗ್ಗೆ 11:25ಕ್ಕೆ ಕೊನೆಯುಸಿರೆಳೆದಿದೆ. ಇದನ್ನು ಮೃಗಾಲಯದ ಪಶುವೈದ್ಯರು ದೃಢಪಡಿಸಿದ್ದಾರೆ.

10 ದಿನದಿಂದ ಚಿಕಿತ್ಸೆ
2009ರ ಅಕ್ಟೋಬರ್ 16ರಂದು ದಶಮಿ ಹುಲಿಯು ತ್ಯಾವರೆಕೊಪ್ಪದ ಸಿಂಹಧಾಮದಲ್ಲಿ ಜನಿಸಿತ್ತು. 17 ವರ್ಷದ ದಶಮಿಗೆ ಈಚೆಗೆ ವಯೋಸಹಜ ಆರೋಗ್ಯ ಸಮಸ್ಯೆ ಕಾಣಿಸಿತ್ತು. ಈ ಮಧ್ಯೆ ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಆದ್ದರಿಂದ ಕಳೆದ ಹತ್ತು ದಿನದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹುಲಿ ಸಾವನ್ನಪ್ಪಿದೆ.
ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ವಿಭಾಗ, ಐ.ಎ.ಹೆಚ್. ಮತ್ತು ವಿ.ಬಿ. ಹಾಗೂ ಮೃಗಾಲಯದ ಪಶುವೈದ್ಯರ ತಂಡವು ಸೋಮವಾರ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ ಎಂದು ಅಮರಾಕ್ಷರ ಅವರು ತಿಳಿಸಿದ್ದಾರೆ.