ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸೊರಬ: ಮೇಯಲು ತೆರಳಿದ್ದ 38 ಕುರಿಗಳು (Sheep) ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿವೆ. ಸೊರಬ ಪಟ್ಟಣದ ಬಂಗಾರಪ್ಪ ಸ್ಟೇಡಿಯಂ ಬಳಿ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಖಡಕಲಾಟ ಗ್ರಾಮದ ಕುರಿಗಾಹಿ ಸುರೇಶ ಬೀರಾ ಅವಡಖಾನ ಅವರಿಗೆ ಸೇರಿರುವ ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ವಸ್ಥ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಬುಧವಾರ 12 ಕುರಿಗಳು ಮೃತಪಟ್ಟಿದ್ದು, ಗುರುವಾರ 26 ಕುರಿಗಳು ಸಾವಿಗೀಡಾಗಿವೆ. ಸ್ಥಳಕ್ಕೆ ಪಶು ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದು, ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕುರಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.
ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಪ್ರದೀಪ್ ಕುಮಾರ್, ಪಶುವೈದ್ಯಕೀಯ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ » ವಾಹನ ಡಿಕ್ಕಿಯಾಗಿ ಏಳು ತಿಂಗಳ ಚಿರತೆ ಸಾವು, ಎಲ್ಲಿ?

38 Sheep succumbed
LATEST NEWS
- ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

- ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಅಟ್ಯಾಕ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಉಷಾ ನರ್ಸಿಂಗ್ ಹೋಂ ಬಳಿ ಅಂಬ್ಯುಲೆನ್ಸ್ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು















