ಆನವಟ್ಟಿ: ಇಲ್ಲಿನ ತಲ್ಲೂರು ಪೆಟ್ರೋಲ್ ಬಂಕ್ ಹತ್ತಿರ ಹೆದ್ದಾರಿಯಲ್ಲಿ ನಾಟಾ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ (Tractor) ಬೈಕ್ ಡಿಕ್ಕಿಯಾಗಿ, ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಆನವಟ್ಟಿಯ ನೆಹರೂ ನಗರದ ನಿವಾಸಿ ರಮೇಶ್ (30) ಮೃತರು. ಟ್ರ್ಯಾಕ್ಟರ್ ಚಾಲಕ ಬ್ರೇಕ್ ಹಾಕಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನವು ಅದಕ್ಕೆ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್‌ಗೆ ಯಾವುದೇ ರಿಪ್ಲೆಕ್ಟರ್‌ಗಳನ್ನು ಬಳಸದೇ ಇರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಧಗಧಗ ಹೊತ್ತಿ ಉರಿದ ಬಟ್ಟೆ ಅಂಗಡಿ, ಜ್ಯೂಸ್ ಸೆಂಟರ್








