ಕೆರೆಗೆ ಹಾರಿದ ಕಾರು, ಓರ್ವ ಸಾವು, ಮತ್ತೊಬ್ಬ ನಾಪತ್ತೆ, ಎಲ್ಲಿ, ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ಸೊರಬ: ಚಾಲಕನ ನಿಯಂತ್ರಣ ತಪ್ಪಿದ ಕಾರು (car plunge) ಕೆರೆಗೆ ಉರುಳಿದ್ದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್‌ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕನೆಕೊಪ್ಪ ಹೊಸೂರು ತಿರುವಿನಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.

ಪುನೇದಹಳ್ಳಿಯ ನವೀನ್‌ ಮೃತಪಟ್ಟಿದ್ದಾರೆ. ರಾಮಚಂದ್ರ ಎಂಬುವವರು ನಾಪತೆಯಾಗಿದ್ದಾರೆ. ಅವರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಹೇಗಾಯ್ತು ಘಟನೆ?

ಇವತ್ತು ಬೆಳಗಿನ ಜಾವ ನವೀನ್‌, ರಾಮಚಂದ್ರ, ರುದ್ರೇಶ್‌ ಮತ್ತು ಮಂಜುನಾಥ್‌ ಎಂಬುವವರು ಶಿಕಾರಿಪುರದಿಂದ ಆನವಟ್ಟಿಗೆ ತೆರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಈಕೋ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಹಾರಿದೆ. ಘಟನೆಯಲ್ಲಿ ನವೀನ್‌ ಮೃತಪಟ್ಟಿದ್ದಾರೆ. ರಾಮಚಂದ್ರ ಕಣ್ಮರೆಯಾಗಿದ್ದಾರೆ. ರುದ್ರೇಶ್‌ ಮತ್ತು ಮಂಜುನಾಥ್‌ ಪಾರಾಗಿದ್ದಾರೆ.

car-plunge-to-lake-in-anavatti.

ಇದನ್ನೂ ಓದಿ » ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಯುವಕ ಸಾವು, ಮತ್ತೊಬ್ಬನಿಗೆ ಗಂಭೀರ ಪೆಟ್ಟು

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. ಆನವಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment