ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಬೈಕಿನಲ್ಲಿ ಹಿಂಬಾಲಿಸಿ ಮಾಂಗಲ್ಯ ಸರ ಅಪಹರಣ, ಅದೃಷ್ಟವಶಾತ್‌ ಮಹಿಳೆ ಪಾರು

ಸೊರಬ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಕೆಟಿಎಂ ಬೈಕಿನಲ್ಲಿ ಹಿಂಬಾಲಿಸಿ ಆಕೆಯ ಕೊರಳಲಿದ್ದ ಚಿನ್ನದ ಮಾಂಗಲ್ಯ (Chain) ಅಪಹರಿಸಲಾಗಿದೆ. ತಲ್ಲೂರು ಸಮೀಪ ಹುಣಸವಳ್ಳಿ – ಯಾತ್ರಿ ನಿವಾಸ ಡಾಬಾದ ಬಳಿ ಘಟನೆ ಸಂಭವಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಮಹಾಲಕ್ಷ್ಮಿ ಎಂಬುವವರ ಕೊರಳಲ್ಲಿ ಇದ್ದ 35 ಗ್ರಾಂ ತೂಕದ ₹2 ಲಕ್ಷ ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದೆ.

ಹೇಗಾಯ್ತು ಘಟನೆ?

soraba anavatti graphics

Nanjappa Hospital Advertisement

ಮಹಾಲಕ್ಷ್ಮಿ ಅವರು ಸಂಬಂಧಿಕರ ಮನೆಗೆ ಸಿಮಂತ ಕಾರ್ಯಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ತಲ್ಲೂರು ಬಳಿ ಇಬ್ಬರು ಅಪರಿಚಿತರು ಮಹಾಲಕ್ಷ್ಮಿ ಅವರ ಸ್ಕೂಟಿಯನ್ನು ಕೆಟಿಎಂ ಬೈಕಿನಲ್ಲಿ ಹಿಂಬಾಲಿಸಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಅಧಿಕಾರಿಗಳಿಂದಲೇ ಕಡತಗಳಿಗೆ ಬೆಂಕಿ ಆರೋಪ, ಕಚೇರಿ ಮುಂದೆ ದಿಢೀರ್‌ ಹೋರಾಟ

ಚಲಿಸುತ್ತಿರುವಾಗಲೇ ಕೆಟಿಎಂ ಬೈಕಿನ ಹಿಂಬದಿ ಸವಾರ ಮಹಾಲಕ್ಷ್ಮಿ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಅಲ್ಲದೆ ಸ್ಕೂಟಿಗೆ ಒದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಮಹಾಲಕ್ಷ್ಮಿ ಅವರು ಕೂಗಿಕೊಳ್ಳುತ್ತಿದ್ದಂತೆ ಕೆಟಿಎಂ ಬೈಕಿನಲ್ಲಿದ್ದವರು ವೇಗವಾಗಿ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ಆನವಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

June-2025-Report-Shivamogga-Live-New-New.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment