ಬಾವಿಗೆ ಬಿದ್ದ ಹಸು ರಕ್ಷಣೆ, ಹೇಗಾಯ್ತು ಕಾರ್ಯಾಚರಣೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸೊರಬ: ಬಾವಿಗೆ ಬಿದ್ದಿದ್ದ ಹಸುವನ್ನು (Cow) ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಸೊರಬದ ಹೊಸಪೇಟೆ ಬಡಾವಣೆಯ ಹುಚ್ಚಪ್ಪ ಎಂಬುವವರ 6 ವರ್ಷದ ಹಸು ಬಾವಿಗೆ ಬಿದ್ದಿತ್ತು.

ಅಂದಾಜು 30 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಅದನ್ನು ರಕ್ಷಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Cow-Rescued-at-Hosapete-in-Soraba

ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ‍್ಯಾಂಕ್‌, ಏನಿದು ರ‍್ಯಾಂಕಿಂಗ್‌? ವಿವಿ ಪಡೆದ ಅಂಕಗಳೆಷ್ಟು?

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ.‌ಮಹಬಲೇಶ್ವರ್, ಸಹ ಠಾಣಾಧಿಕಾರಿ ಆರ್. ಶಂಕರ್, ಸಿಬ್ಬಂದಿ ಶ್ರೀಶೈಲ ಬಿ. ಚಿಪ್ಪಲಕಟ್ಟಿ, ಸಂದೀಪ್ ರಾಠೋಡ್, ಭೀಮಪ್ಪ ತುಂಗಳ ಪಾಲ್ಗೊಂಡಿದ್ದರು. 

Cow rescued at Soraba

Leave a Comment