ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸೊರಬ : ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭು ಮೇಸ್ತ್ರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಶ್ರೀರಂಜನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಬಿಜೆಪಿ ಸದಸ್ಯರು ಅಡ್ಡಮತದಾನ (Cross Voting) ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ » ಹಿಟ್ ಅಂಡ್ ರನ್ ಅಪಘಾತ, ತಕ್ಷಣ ನೆರವಿಗೆ ಧಾವಿಸಿದ ಮಿನಿಸ್ಟರ್ ಮಧು ಬಂಗಾರಪ್ಪ
ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿತ್ತು. ಬಿಜೆಪಿ ಸದಸ್ಯ ಪ್ರಭು ಮೇಸ್ತ್ರಿ ಮಾತ್ರ ನಾಮಪತ್ರ ಸಲ್ಲಿಸಲು ಅರ್ಹವಾಗಿದ್ದರು. ಆದ್ದರಿಂದ ಪ್ರಭು ಮೇಸ್ತ್ರಿ ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಭು ಮೇಸ್ತ್ರಿ ಆಯ್ಕೆಯಾದ ಬಳಿಕ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಕಾಂಗ್ರೆಸ್ಗೆ ಉಪಾಧ್ಯಕ್ಷ ಸ್ಥಾನ
ಕಾಂಗ್ರೆಸ್ ಪಕ್ಷದ ಶ್ರೀರಂಜನಿ ಅವರು ಪುರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀರಂಜನಿ 8 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಜಯಲಕ್ಷ್ಮಿ 5 ಮತ ಪಡೆದು ಪರಾಭವಗೊಂಡಿದ್ದಾರೆ. ಒಬ್ಬ ಬಿಜೆಪಿ ಸದಸ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತ (Cross Voting) ಚಲಾಯಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಂಪು ಪಟ್ಟಿ ಧರಿಸಿ ವಕೀಲರ ಪ್ರತಿಭಟನೆ, ಕಾರಣವೇನು?
ಪುರಸಭೆಯಲ್ಲಿ ಒಟ್ಟು 12 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿಯ 6, ಜೆಡಿಎಸ್ 1, ಕಾಂಗ್ರೆಸ್ನ 4, ಸ್ವತಂತ್ರ 1 ಸದಸ್ಯರಿದ್ದಾರೆ. ಸಂಸದ, ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಿದ್ದರು. ಹಾಗಾಗಿ 15 ಮಂದಿ ಮತ ಚಲಾಯಿಸಬೇಕಿತ್ತು. ಆದರೆ ಸಂಸದ ರಾಘವೇಂದ್ರ ಗೈರಾಗಿದ್ದರು, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಚುನಾವಣೆಗೆ ತಡವಾಗಿ ಬಂದ ಹಿನ್ನೆಲೆ 13 ಮತ ಮಾತ್ರ ಚಲಾವಣೆಯಾಗಿತ್ತು.

LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು















