ಚಂದ್ರಗುತ್ತಿಯಲ್ಲಿ ನವರಾತ್ರಿ ಉತ್ಸವ, ಕಲಾ ತಂಡಗಳ ನೋಂದಣಿಗೆ ಅವಕಾಶ, ಏನೆಲ್ಲ ಧಾರ್ಮಿಕ ಕಾರ್ಯಕ್ರಮ ಇರುತ್ತೆ?

ಸೊರಬ: ಚಂದ್ರಗುತ್ತಿ (Chandragutti) ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಸೆ.22 ರಿಂದ ಅ.2ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಏನೆಲ್ಲ ಕಾರ್ಯಕ್ರಮ ಇರಲಿದೆ?

ಪ್ರತಿದಿನ ದೇವಿ ಪಾರಾಯಣ, ನವಗ್ರಹ ಜಪ, ಮೃತ್ಯುಂಜಯ ಜಪ, ಪವಮಾನ, ಶ್ರೀ ರೇಣುಕಾ ಸಹಸ್ರನಾಮ, ಶ್ರೀ ದುರ್ಗಾ ಸಹಸ್ರನಾಮ, ಲಲಿತಾ ಸಹಸ್ರನಾಮ ಸೇರಿದಂತೆ ಪೂಜಾ ವಿಧಿಗಳು ನಡೆಯಲಿವೆ. ಅ.2ರಂದು ವಿಜಯದಶಮಿ ಬನ್ನಿ ಉತ್ಸವದಂದು ಗ್ರಾಮದಲ್ಲಿ ತಾಯಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ.

Chandragutti-Temple-Soraba.

ಕಲಾ ತಂಡಗಳ ನೋಂದಣಿಗೆ ಅವಕಾಶ

ಪಲ್ಲಕ್ಕಿ ಉತ್ಸವದ ಸಂದರ್ಭ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಛಿಸುವ ಕಲಾ ತಂಡಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸೆ.18ರ ಸಂಜೆ 5 ಗಂಟೆಯೊಳಗೆ ತಮ್ಮ ತಂಡದ ಹೆಸರು, ತಾವು ನೀಡುವ ಕಾರ್ಯಕ್ರಮದ ವಿವರವನ್ನು ಮನವಿ ಪತ್ರದೊಂದಿಗೆ ಕಾರ್ಯನಿರ್ವಾಹಣಾಧಿಕಾರಿ, ಶ್ರೀ ರೇಣುಕಾಂಬ ದೇವಸ್ಥಾನ, ಚಂದ್ರಗುತ್ತಿ, ಸೊರಬ ತಾಲೂಕು, ಶಿವಮೊಗ್ಗ 577429 ಇಲ್ಲಿಗೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

JNNCE-Admission-Advt-scaled

ಇದನ್ನೂ ಓದಿ » ಭದ್ರಾ ಜಲಾಶಯಕ್ಕೆ ಡಿ.ಕೆ.ಶಿವಕುಮಾರ್‌ ಬಾಗಿನ, ಪ್ರವಾಸಿ ಮಂದಿರ ಉದ್ಘಾಟನೆ, ಡಿಸಿಎಂ ಏನೆಲ್ಲ ಹೇಳಿದರು?

Prashanth-Loan-Advertisement.

Dasara in Chandragutti temple

Chandragutti-Renukamba-Temple

Leave a Comment