ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SORABA NEWS | 31 ಆಗಸ್ಟ್ 2020
ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಡರಾತ್ರಿ ವರದಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಮನೆಯ ಅಂಗಳಕ್ಕೆ ಹಾಗೂ ಮನೆಯ ಒಳಗಡೆ ಹುಚ್ಚುನಾಯಿ ಬರುತ್ತದೆ ಎಂದು ಮನೆಯ ಮಾಲಿಕ ನಿಂಗಪ್ಪ ಪುಟ್ಟಪ್ಪ (58) ಗೇಟ್ ಮುಂಭಾಗ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾನೆ. ರಾತ್ರಿ ಮೂತ್ರ ಮಾಡಲು ತೆರಳಿದಾಗ ಆತ ಅದೇ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಹುಚ್ಚುನಾಯಿಗೆ ಖೆಡ್ಡಾ ತೋಡಲು ಹೋಗಿ ಆತನೇ ಮೃತಪಟ್ಟಿರುವುದು ದುರ್ದೈವ. ಮೃತ ನಿಂಗಪ್ಪನ ಪುತ್ರ ರಾಕೇಶ್ ಕುಮಾರ್ ನೀಡಿದ ಹೇಳಿಕೆ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]