ಸೊರಬದ ಭಾರಂಗಿ ಗ್ರಿಡ್‌ಗೆ ದಿಢೀರ್‌ ಮುತ್ತಿಗೆ ಹಾಕಿದ ರೈತರು, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 SEPTEMBER 2023

SORABA : ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತರು (Farmers) ಭಾರಂಗಿ ವಿದ್ಯುತ್‌ ಗ್ರಿಡ್‌ಗೆ ದಿಢೀರ್‌ ಮುತ್ತಿಗೆ ಹಾಕಿದರು. ಸೊರಬ ತಾಲೂಕು ಆನವಟ್ಟಿ ಹೋಬಳಿಯ ಭಾರಂಗಿ ಗ್ರಿಡ್‌ನಿಂದ ತ್ರಿ ಫೇಸ್‌ ವಿದ್ಯುತ್‌ ಅನ್ನು ಸಮಪರ್ಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಈ ಮಧ್ಯೆ ಸರಿಯಾಗಿ ವಿದ್ಯುತ್‌ ಪೂರೈಕೆ (power supply) ಮಾಡದೆ ಹೊಲಕ್ಕೆ ನೀರು ಹಾಯಿಸಲು ಆಗುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ ಎಂದು ರೈತರು ಆಪಾದಿಸಿದರು. ಇದುವರೆಗೆ ಹಗಲಿನಲ್ಲಿ 4 ಗಂಟೆ, ರಾತ್ರಿ ವೇಳೆ 3 ಗಂಟೆ ತ್ರಿ ಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ ಒಂದು ಗಂಟೆ ಮಾತ್ರ ತ್ರೀ ಫೇಸ್‌ ವಿದ್ಯುತ್‌ (power) ನೀಡಲಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆಪಾದಿಸಿದರು.

ಇದನ್ನೂ ಓದಿ – ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಸಹಿಸಲು ಅಸಾಧ್ಯ, ಕ್ಷಮೆ ಕೇಳುವಂತೆ ಒತ್ತಾಯ

ಮೆಸ್ಕಾಂ ಆನವಟ್ಟಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ರಮೇಶ್‌ ಆಗಮಿಸಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನೆಯಲ್ಲಿ ಬಸವರಾಜ್‌ ಭಾರಂಗಿ, ಶಂಕರಗೌಡ, ಹುಚ್ಚಪ್ಪ, ರಾಮಪ್ಪ,  ನಾಗರಾಜ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment