ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 MARCH 2023
SORABA : ಕೊರಳಲ್ಲಿರುವ ಚಿನ್ನದ ಸರವನ್ನು ಫಳಫಳ ಹೊಳೆಯುವಂತೆ ಮಾಡಿಕೊಡುವುದಾಗಿ ನಂಬಿಸಿ ವೃದ್ಧೆಯೊಬ್ಬರನ್ನು ವಂಚಿಸಲಾಗಿದೆ. ಸೊರಬ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ರಾಧಮ್ಮ ಎಂಬುವವರ ಚಿನ್ನಾಭರಣವನ್ನು (ornaments) ಕಳ್ಳತನ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಗಾಯ್ತು ಘಟನೆ?
ರಾಧಮ್ಮ ಎಂಬುವವರ ಮನೆ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಿನ್ನಾಭರಣಕ್ಕೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಕೊರಳಲ್ಲಿದ್ದ 20 ಗ್ರಾಂ ತೂಕದ ಬಂಗಾರದ ಚೈನ್, 40 ಗ್ರಾಂ ತೂಕದ ಲಕ್ಷ್ಮಿ ತಾಳಿಸರ ಮತ್ತು ಚೈನ್ ಬಿಚ್ಚಿಸಿಕೊಂಡಿದ್ದಾರೆ. ಕುಕ್ಕರ್, ನೀರು ಮತ್ತು ಅರಿಶಿಣ ತರುವಂತೆ ರಾಧಮ್ಮ ಅವರಿಗೆ ಅಪರಿಚಿತರು ತಿಳಿಸಿದರು.
ರಾಧಮ್ಮ ಅವರು ಸ್ಟೀಲ್ ಡಬ್ಬಿ ತಂದು ಕೊಟ್ಟಿದ್ದು, ಅದರೊಳಗೆ ಚಿನ್ನದ ಸರಗಳನ್ನು ಹಾಕುವಂತೆ ನಟಿಸಿ, ಇದನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ ಎಂದು ಅಪರಿಚಿತರು ತಿಳಿಸಿದರು. ರಾಧಮ್ಮ ಅವರು ಮನೆಯೊಳಗೆ ಹೋಗುತ್ತಿದ್ದಂತೆ ಇಬ್ಬರು ಅಪರಿಚಿತರು ತಾವು ತಂದಿದ್ದ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅನುಮಾನಗೊಂಡು ಸ್ಟೀಲ್ ಡಬ್ಬಿಯ ಮುಚ್ಚಳ ತೆಗೆದು ನೋಡಿದಾಗ ಸರಗಳು ಇರಲಿಲ್ಲ.
ಪಕ್ಕದ ಮನೆಗೂ ಹೋಗಿದ್ದರು
ವಂಚಕರು ರಾಧಮ್ಮ ಅವರ ಪಕ್ಕದ ಮನೆಗೂ ತೆರಳಿದ್ದರು. ಆದರೆ ಅವರು ಪಾಲಿಶ್ ಬೇಕಿಲ್ಲ ಎಂದು ಅವರನ್ನು ಸಾಗಹಾಕಿದ್ದರು. ಘಟನೆ ಕುರಿತು ರಾಧಮ್ಮ ಅವರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಮತ್ತೆ ಪೌಡರ್ ಗ್ಯಾಂಗ್ ಪ್ರತ್ಯಕ್ಷ, ಮಹಿಳೆಗೆ ವಂಚನೆ
ಹೋಂಡಾ ಶೈನ್ ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ತಮ್ಮನ್ನು ವಂಚಿಸಿ 2.10 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು (ornaments) ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.