SHIVAMOGGA LIVE NEWS | 18 AUGUST 2023
SORABA : ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ (Special Rituals) ಪೂಜೆ ಹಾಗೂ ನವಗ್ರಹ ಪೂರ್ವಕ ಸಂಪ್ರೋಕ್ಷಣೆ ಹೋಮ ನೆರವೇರಿದವು. ಆ.2ರಂದು ದುಷ್ಕರ್ಮಿಗಳು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಕಳ್ಳತನ ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಮೊದಲನೇ ದಿನ ನವಗ್ರಹ ಪೂರ್ವಕ ಸಂಪ್ರೋಕ್ಷಣೆ ಕಾರ್ಯಕ್ರಮಗಳು ನಡೆದವು.
![]() |
ಇದನ್ನೂ ಓದಿ – ಚಂದ್ರಗುತ್ತಿ ದೇವಸ್ಥಾನದಲ್ಲಿ ಕಳ್ಳತನ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೂವರು ಅರೆಸ್ಟ್, ವಿಚಾರಣೆ ವೇಳೆ ಹೇಳಿದ್ದೇನು?
ಅಮ್ಮನವರಿಗೆ ಶಕ್ತಿ ತುಂಬುವ ರೂಪದಲ್ಲಿ ಇಲ್ಲಿನ ಯಾಗ ಶಾಲೆಯಲ್ಲಿ ನವಗ್ರಹ ಪೂರ್ವಕ ಸಂಪ್ರೋಕ್ಷಣೆ ಹಾಗೂ ಕಲಾವೃದ್ಧಿ, ನವಚಂಡಿ ಹೋಮ, ದೇವಿಯ ಮರು ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜ ಕೈಂಕರ್ಯಗಳು ಜರುಗಿದವು.
ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಸಿದ್ದಾಪುರದ ಅನಂತ್ ಭಟ್ ರಾಯ್ಕರ್, ದೇವಸ್ಥಾನದ ಪ್ರಧಾನ ಅರ್ಚಕ ಅರವಿಂದ್ ಭಟ್, ದೇವಾಲಯದ ತಾಂತ್ರಿಕ ಕೆಳದಿ ರಾಮ ಭಟ್ ನೆರವೇರಿಸಿದರು. ವಿಶೇಷ ತಳಿರು ತೋರಣ ಹಾಗೂ ಬಗೆ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು, ಭಕ್ತರಿಗೆ ಅನ್ನದಾಸೋಹ ಸೇವೆ ನಡೆಯಿತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200