ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಗದಿ, ಸಿದ್ಧತೆ ಕುರಿತು ಮಹತ್ವದ ಮೀಟಿಂಗ್

SHIVAMOGGA LIVE NEWS | 19 DECEMBER 2023

THIRTHAHALLI : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಗದಿಯಾಗಿ. ಜನವರಿ 11, 12 ಮತ್ತು 13ರಂದು ಜಾತ್ರೆ ನಡೆಯಲಿದೆ. ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸು ಸಲುವಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳ ಸಭೆ ನಡೆಸಲಾಯಿತು.

ಏನೇನೆಲ್ಲ ಚರ್ಚೆಯಾಯ್ತು?

POINT-1-jpg.webpದೊಡ್ಡ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಆಡಳಿತ ಸಂಪೂರ್ಣ ಹೊಣೆ ಹೊತ್ತು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು.

POINT-2-jpg.webpರಾಮಕೊಂಡ ಸಂಪರ್ಕಿಸಲು ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಿರು ಸೇತುವೆಗೆ ಪಟ್ಟಣ ಪಂಚಾಯಿತಿಯಿಂದ 6 ಲಕ್ಷ ರೂ. ವ್ಯಯ ಮಾಡಲಾಗುತ್ತಿದೆ. ಹೆಚ್ಚಿನ ಸಹಕಾರ ನೀಡಲು ಹಣ ಇಲ್ಲ ಎಂದು ಮುಖ್ಯಾಧಿಕಾರಿ ಕುರಿಯಕೊಸ್ ಉತ್ತರಿಸಿದರು.

Kalleshwara-Enterprises.webp

POINT-3-jpg.webpಜಾತ್ರೆ ಸಮಯದಲ್ಲಿ ಪಟ್ಟಣ ಪಂಚಾಯಿತಿಗೆ ಹೆಚ್ಚಿನ ಆದಾಯ ಲಭಿಸುತ್ತದೆ. ಆದ್ದರಿಂದ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮೀಸಲಿಟ್ಟ ಹಣವನ್ನು ಜಾತ್ರೆಗೆ ನೀಡಬೇಕು. ರಾಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಾಸ್ತು ಪ್ರಕಾರ ಮೆಟ್ಟಿಲು ಮಾಡಬೇಕು.

ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಈ ಬಾರಿ ದೊಡ್ಡ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕೋವಿಡ್‌ ಸೋಂಕು ಹೆಚ್ಚಾಗುವ ಆತಂಕವಿದೆ. ಆದ್ದರಿಂದ ಸಾರ್ವಜನಿಕರು ಜಾಗ್ರತೆ ವಹಿಸಬೇಕಿದೆ. ಜನರಿಗೆ ಯಾವುದೆ ತೊಂದರೆ ಆಗದಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು.ಆರಗ ಜ್ಞಾನೇಂದ್ರ, ಶಾಸಕ

ತಹಶೀಲ್ದಾರ್‌ ಜಕ್ಕನ ಗೌಡರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌, ಉಪಾಧ್ಯಕ್ಷ ರಹಮತ್‌ ಉಲ್ಲಾ ಅಸಾದಿ, ಎಳ್ಳಮವಾಸ್ಯೆ ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಸೈಕಲ್‌ನಲ್ಲಿ ಆಗಮಿಸಿದ ಅಪ್ಪು ಅಭಿಮಾನಿ, ಗಿನ್ನಿಸ್‌ ದಾಖಲೆಯ ಗುರಿ, ಏನಿದು ಸೈಕಲ್‌ ಯಾತ್ರೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment