ಸಾಲು ಸಾಲು ಸೋಲು, ಆರು ತಿಂಗಳು ಜೈಲು, ತಾಳ್ಮೆಗೆ ಸಿಕ್ತು ಫಲ, ಸಚಿವ ಆರಗ ಜ್ಞಾನೇಂದ್ರ ಬಗ್ಗೆ ತಿಳಿಬೇಕಾದ ಸಂಗತಿಗಳು ಇಲ್ಲಿವೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 4 ಆಗಸ್ಟ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನಿರೀಕ್ಷೆಯಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಬಹು ವರ್ಷ ತಾಳ್ಮೆಯಿಂದ ಕಾದಿದ್ದ ಜ್ಞಾನೇಂದ್ರ ಅವರಿಗೆ ಸಚಿವರಾಗುವ ಯೋಗ ಬಂದಿದೆ. ರಾಜಭವನದಲ್ಲಿ ನಡೆದ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ಸಚಿವ ಆರಗ ಜ್ಞಾನೇಂದ್ರ ಅವರ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ.

ಆರಗ ಜ್ಞಾನೇಂದ್ರ ಅವರ ಕುಟುಂಬ

ಆರಗ ಜ್ಞಾನೇಂದ್ರ ಅವರು 1951ರ ಮಾರ್ಚ್ 15ರಂದು ಜನಿಸಿದರು. ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಮೊದಲನೆಯವರು.

ಪ್ರಾಥಮಿಕ ವಿದ್ಯಭ್ಯಾಸ ಆರಗ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ವಿದ್ಯಭ್ಯಾಸ ಮೊಟಕುಗೊಳಿಸುವ ಯೋಚನೆಯಲ್ಲಿದ್ದರು. ಆಗ RSS ಪ್ರಮುಖರಾದ ತಾರಗೊಳ್ಳಿ ನಾಗರಾಜ್ ರಾವ್ ಅವರ ಸಂಪರ್ಕಕ್ಕೆ ಬಂದರು. ಶಿಕ್ಷಣ ಮುಂದುವರೆಯಿತು. ಬಿ.ಕಾಂ ಪದವಿ ಪಡೆದರು.

ಜ್ಞಾನೇಂದ್ರ ಅವರ ಪತ್ನಿ ಪ್ರಫುಲ್ಲಾ. ಮಗ ಅಭಿನಂದನ್, ಪತ್ನಿ ಶೃತಿ ಅವರೊಂದಿಗೆ ಗುಡ್ಡೇಕೊಪ್ಪದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜ್ಞಾನೇಂದ್ರ ಅವರ ಮಗಳು ಅನನ್ಯಾ, ಐಎಫ್ಎಸ್ ಅಧಿಕಾರಿ ಸಮರ್ಥ್ ಅವರೊಂದಿಗೆ ವಿವಾಹವಾಗಿ ತಮಿಳುನಾಡಿನ ಮಧುರೈನಲ್ಲಿದ್ದಾರೆ.

227160129 1441436646217751 1236199327913812478 n.jpg? nc cat=101&ccb=1 3& nc sid=8bfeb9& nc ohc=HgSkedMaFtUAX T9py5& nc oc=AQn SfFEbCCLhSnsCj QGUW9SYYrLz98uXFGh4d7J43mY3Q5oEPFXAygmQVPPYK IsDJDtIVaRVMAuqTWqLLDXu9& nc ht=scontent.fblr20 1

ಸಂಘಟನೆ, ತುರ್ತು ಪರಿಸ್ಥಿತಿ

ವಿದ್ಯಾರ್ಥಿ ದಿಸೆಯಿಂದ RSS ಸಂಪರ್ಕ ಹೊಂದಿದ್ದ ಆರಗ ಜ್ಞಾನೇಂದ್ರ ಅವರು, ಪೂರ್ಣ ಶಿಕ್ಷಣ ಪಡೆದರು. RSS ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ನಿಭಾಯಿಸಿದ್ದರು.

ತುರ್ತು ಪರಿಸ್ಥಿತಿ ಸಂದರ್ಭ ಸರ್ಕಾರದ ನಡೆ ವಿರುದ್ಧ ಹೋರಾಟ ನಡೆಸಿದರು. ಈ ವೇಳೆ ಇವರನ್ನು ಬಂಧಿಸಿ, ಆರು ತಿಂಗಳು ಜೈಲಿನಲ್ಲಿ ಇರಿಸಲಾಯಿತು.

ಸೋಲು, ಗೆಲುವಿನ ರುಚಿ

ಸಂಘಟನೆ, ಹೋರಾಟದ ಜೊತೆಗೆ ಆರಗ ಜ್ಞಾನೇಂದ್ರ ಅವರು ರಾಜಕೀಯದಲ್ಲಿ ಸಕ್ರಿಯವಾದರು. ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು.

1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯ ಅಖಾಡಕ್ಕಿಳಿದರು. ಆದರೆ ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಾಣುವಂತಾಯಿತು. 1985, 1989ರಲ್ಲೂ ಆರಗ ಜ್ಞಾನೇಂದ್ರ ಅವರಿಗೆ ಸತತ ಸೋಲಾಯಿತು.

ಸಾಲು ಸಾಲು ಸೋಲುಗಳಾದರೂ ಆರಗ ಜ್ಞಾನೇಂದ್ರ ಅವರು ಎದಗುಂದಲಿಲ್ಲ. ಪಕ್ಷ ಸಂಘಟನೆ ಮಾಡುತ್ತ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದರು.

223390988 1166828920463683 4389499564621446413 n.jpg? nc cat=109&ccb=1 3& nc sid=730e14& nc ohc=JB10rgM2VYEAX ZV pa& nc ht=scontent.fblr1 6

ಈ ನಡುವೆ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದರು. ಅಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದರು. ಶಿಮುಲ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದರು.

1994ರಲ್ಲಿ ತೀವ್ರ ಜಿದ್ದಾಜಿದ್ದಿಯ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದರು. ಎರಡು ಭಾರಿ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಬಿ. ಚಂದ್ರೇಗೌಡ ಅವರನ್ನು ಸೋಲಿಸಿದ್ದರು.

ಒಮ್ಮೆ ಗೆದ್ದವರು ತೀರ್ಥಹಳ್ಳಿ ಪುನಃ ಗೆಲ್ಲವುದಿಲ್ಲ ಎಂಬ ನಂಬಿಕೆ ಇತ್ತು. ಇದನ್ನು ಹುಸಿಗೊಳಿಸಿ 1999 ಮತ್ತು 2004ರಲ್ಲಿ ಆರಗ ಜ್ಞಾನೇಂದ್ರ ಅವರು ಗೆಲುವು ಸಾಧಿಸಿದರು. 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಸೋಲನುಭವಿಸಿದರು.

2018ರ ಚುನಾವಣೆ ತೀರ್ಥಹಳ್ಳಿ ಕ್ಷೇತ್ರದ ಪಾಲಿಗೆ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿತ್ತು. ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ್, ಜೆಡಿಎಸ್ನಿಂದ ಆರ್.ಎಂ.ಮಂಜುನಾಥಗೌಡ ಅವರು ಬಿಜೆಪಿಯ ಆರಗ ಜ್ಞಾನೇಂದ್ರ ಅವರಿಗೆ ಎದುರಾಳಿಯಾಗಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಆರಗ ಜ್ಞಾನೇಂದ್ರ ಅವರು ಗೆದ್ದು ಬೀಗಿದರು. 22 ಸಾವಿರ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದರು.

ರೈತ ಮೋರ್ಚಾಯಿಂದ ಹೌಸಿಂಗ್ ಬೋರ್ಡ್ ತನಕ

ಶಾಸಕರಾದ ಬಳಿವು ಆರಗ ಜ್ಞಾನೇಂದ್ರ ಅವರು ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. ಅಡಕೆ ಬೆಳೆಗಾರರ ಪರಿವಾಗಿ ಹೋರಾಟಗಳನ್ನು ನಡೆಸಿದರು. ಕೇಂದ್ರ ಸರ್ಕಾರದವರೆಗೆ ರೈತರ ನಿಯೋಗ ಕರೆದೊಯ್ದರು.

ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಅಡಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾದರು. ಹೌಸಿಂಗ್ ಬೋರ್ಡ್ ಜವಾಬ್ದಾರಿಯನ್ನೂ ಇವರಿಗೆ ಹೆಗಲಿಗೆ ವಹಿಸಿತ್ತು ಸರ್ಕಾರ.

ಈಗ ಆರಗ ಜ್ಞಾನೇಂದ್ರ ಅವರು ಸಚಿವರಾಗಿದ್ದಾರೆ. ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರಿಗೆ ಇದು ಉತ್ಸಾಹ ಹೆಚ್ಚಿಸಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment