ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI | 9 ಜನವರಿ 2020
ಅಪಹರಣಕಾರನಿಗೆ ತುರೇಮಣೆಯಲ್ಲಿ ಹೊಡೆದು ತಾಯಿಯೊಬ್ಬಳು ಮಗುವನ್ನು ರಕ್ಷಿಸಿದ್ದಾಳೆ. ತಾಯಿಯ ದಿಟ್ಟ ನಡೆ ಸರ್ವರ ಮೆಚ್ಚುಗೆ ಗಳಿಸಿದೆ. ಈ ನಡುವೆ ಅಪಹರಣಕಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿ ಘಟನೆ ನಡೆದಿದೆ. ಶಿವಕುಮಾರ್ ಮತ್ತು ಕೃಷ್ಣವೇಣಿ ಅವರ ನಾಲ್ಕು ವರ್ಷದ ಮಗುವಿನ ಅಪಹರಣಕ್ಕೆ ಪ್ರಯತ್ನಿಸಲಾಗಿತ್ತು.
ದಿಢೀರನೆ ಬಂದ ಅಗಂತುಕ
ಮನೆಯಲ್ಲಿ ಯಾರು ಇಲ್ಲ ಎಂದುಕೊಂಡು ದಿಢೀರನೆ ನುಗ್ಗಿದ ಆಗಂತುಕನೊಬ್ಬ, ಮಗುವನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಮಗುವನ್ನು ರಕ್ಷಿಸಲು ತಾಯಿ ಕೃಷ್ಣವೇಣಿ ಮುಂದಾಗಿದ್ದಾರೆ. ಆದರೆ ಅಪಹರಣಕಾರ ಕೃಷ್ಣವೇಣಿ ಅವರ ಕುತ್ತಿಗೆಗೆ ಕೈ ಹಾಕಿ, ದೂಡಲು ಯತ್ನಿಸಿದ್ದಾನೆ. ಹಾಗಾಗಿ, ಜೋರಾಗಿ ಕೂಗಿಕೊಂಡು, ಪಕ್ಕದಲ್ಲಿದ್ದ ತುರೇಮಣೆಯಿಂದ ಅಪಹರಣಕಾರನತ್ತ ಬೀಸಿದ್ದಾರೆ.
ಗಾಯ, ಗಾಬರಿಯಲ್ಲಿ ಪರಾರಿ
ತುರೇಮಣೆ ದಾಳಿ ಮತ್ತು ರಕ್ಷಣೆಗಾಗಿ ಕೃಷ್ಣವೇಣಿ ಅವರು ಕೂಗಿಕೊಳ್ಳುತ್ತಿದ್ದಂತೆ, ಗಾಬರಿಗೊಂಡ ಆಗಂತುಕ ಎಸ್ಕೇಪ್ ಆಗಿದ್ದಾನೆ. ಈ ವೇಳೆಗಾಗಲೇ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದಾರೆ. ಕೃಷ್ಣವೇಣಿ ಮತ್ತು ಅವರ ಮಗು ಸುರಕ್ಷಿತವಾಗಿದ್ದಾರೆ. ಇನ್ನು, ಪೊಲೀಸರಿಗೆ ವಿಚಾರ ತಿಳಿಸಲಾಗಿದ್ದು, ತೀರ್ಥಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಮಕ್ಕಳ ಅಪಹರಣ ಯತ್ನದ ಕುರಿತು ಆಗಾಗ ಚರ್ಚೆಯಾಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಆತಂಕಕಾರಿ ಮೆಸೇಜುಗಳು ಹರಿದಾಡಿದ್ದವು. ಈಗ ಅಪಹರಣದ ವಿಫಲ ಯತ್ನ ಬಹಿರಂಗಗೊಳ್ಳುತ್ತಿದ್ದಂತೆ ಜನ ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422