ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 NOVEMBER 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ತೀರ್ಥಹಳ್ಳಿ : ಸಮಸ್ಯೆ ಹುಟ್ಟುಹಾಕಿ ಅದರಿಂದ ಎಷ್ಟು ಬಾರಿ ರಾಜಕೀಯ ಲಾಭ ಪಡೆಯಬೇಕು. ಜನರ ಬದುಕಿನ ವಿಚಾರ ಬಂದಾಗ ಎಲ್ಲರು ಒಗ್ಗೂಡಬೇಕು. ಇಲ್ಲಿ ರಾಜಕೀಯ ಮಾಡಬಾರದು. 60 ವರ್ಷವಾದರೂ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂಬ ನೋವು ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. sharavathi issue
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತೀರ್ಥಹಳ್ಳಿಯಲ್ಲಿ ಶಾಸಕ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ವೇದಿಕೆಯ ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು.
‘ಅಧಿಕಾರ ಬರುತ್ತದೆ ಹೋಗುತ್ತದೆ. ನಮ್ಮ ವಿರುದ್ಧ ಹಲವರು ಮಾತನಾಡುತ್ತಿದ್ದಾರೆ. ಮಾತನಾಡುವವರೆಲ್ಲ ಕೆಲಸ ಮಾಡಿದ್ದರೆ ಇವತ್ತು ಹೋರಾಟ, ಪಾದಯಾತ್ರೆಯ ಅಗತ್ಯವಿರಲಿಲ್ಲ’ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು. ಅಲ್ಲದೆ ಸರ್ವೆ ಕಾರ್ಯ ನಡೆಯುತ್ತಿದೆ. ಅರಣ್ಯ ಖಾತೆ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡರು.
sharavathi issue
ಪರಿಹಾರ ನೀಡಲು 3 ಅವಕಾಶವಿತ್ತು
ಅವಕಾಶ 1 – ಶರಾವತಿ ಯೋಜನೆಯಾಗಿದ್ದು 1978ರಲ್ಲಿ. ಅದಾದ ಬಳಿಕ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬಂತು. ಆಗಲೆ ಯೋಜನೆಗೆ ಜಾಗ ಬಿಟ್ಟುಕೊಟ್ಟವರಿಗೆ ಪರಿಹಾರ ನೀಡಲು ಅವಕಾಶವಿತ್ತು ಎಂದು ಸಿಎಂ ತಿಳಿಸಿದರು.
ಅವಕಾಶ 2 – 1978ಕ್ಕಿಂತಲು ಮೊದಲು ಮೀಸಲು ಅರಣ್ಯ ಯಾವುದು, ವನ್ಯಜೀವಿ ಅರಣ್ಯ ಅರಣ್ಯ ಯಾವುದು ಅನ್ನುವುದರ ಮಾಹಿತಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸರ್ವೆ ಮಾಡಿದಾಗ ಶರಾವತಿ ಯೋಜನೆಗೆ ಜಾಗ ಬಿಟ್ಟುಕೊಟ್ಟವರ ಬಳಿ ಇರುವ ಜಾಗ ಹೊರತು, ಉಳಿದ ಜಾಗವನ್ನು ಅರಣ್ಯ ಎಂದು ಘೋಷಿಸಲು ಅವಕಾಶವಿತ್ತು.
ಅವಕಾಶ 3 – 1978ರಿಂದ 1980ರವರೆಗೆ ಮರು ಸರ್ವೆಗೆ ಅವಕಾಶವಿತ್ತು. ಆಗಲೂ ಶರಾವತಿ ಸಂತ್ರಸ್ಥರಿಗೆ ಜಮೀನು ಕೊಡಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
sharavathi issue
ನಮ್ಮ ತಲೆಗೆ ಕಟ್ಟಲು ನೋಡುತ್ತಿದ್ದಾರೆ
ಇದಕ್ಕೂ ಮೊದಲು ಮಾತನಾಡಿದ ಶಾಸಕ ಹರತಾಳು ಹಾಲಪ್ಪ ಅವರು, ಶರಾವತಿ ಸಂತ್ರಸ್ಥರು ನೆಲೆ ಕಂಡುಕೊಂಡಿರುವ ಭೂಮಿಯ ವಿಚಾರವಾಗಿ, ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯಿಂದ ಸರ್ವೆಗೆ ಅದೇಶ ಕೊಡಬೇಕು. 60 ವರ್ಷದ ಸಮಸ್ಯೆಗೆ ಮುಕ್ತಿ ನೀಡಬೇಕು. ಈ ಸಮಸ್ಯೆಗೆ ಯಡಿಯೂರಪ್ಪ, ರಾಘವೇಂದ್ರ ಮತ್ತು ಈಗಿನ ಸರ್ಕಾರ ಕಾರಣವಲ್ಲ. ಇದು ಹಿಂದಿನ ಸರ್ಕಾರದ ಪಾಪದ ಕೂಸು. ಅದನ್ನು ನಮ್ಮ ತಲೆಗೆ ಕಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ALSO READ – ಎಲೆ ಚುಕ್ಕೆ, ತೀರ್ಥಹಳ್ಳಿಯ ತೋಟಕ್ಕೆ ಸಿಎಂ ಭೇಟಿ, ಇಲ್ಲಿದೆ ಬೊಮ್ಮಾಯಿ ಹೇಳಿದ 3 ಪ್ರಮುಖಾಂಶ
24 ಸಾವಿರ ಎಕರೆಯಲ್ಲಿ ನಾವು ವಾಸವಾಗಿದ್ದೇವೆ. ಅದು ಅರಣ್ಯವೋ, ಗೋಮಾಳವೋ, ಗ್ರಾಮ ಠಾಣವೋ ಗೊತ್ತಿಲ್ಲ. ಕೇಂದ್ರ ಸರ್ಕಾರದವರೆಗೆ ಈ ವಿಚಾರ ಕೊಂಡೊಯ್ದು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಹರತಾಳು ಹಾಲಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಸ್ವಾಮಿ ರಾವ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.