ತೀರ್ಥಹಳ್ಳಿ: ತಾಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ರಾತ್ರಿ ದಿಢೀರನೆ ಭಾರೀ ಗಾಳಿ, ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಗಾಳಿ, ಮಳೆ ರಭಸಕ್ಕೆ (heavy rain) ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಬಡಿ, ಕೂಡಿಗೆ ಗ್ರಾಮದಲ್ಲಿ ಅನೇಕ ರೈತರ ತೋಟದಲ್ಲಿ ಅಡಕೆ ಮರಗಳು ಉರುಳಿ ಬಿದ್ದಿವೆ. ಕೆಲವು ಮರಗಳು ಅರ್ಧಕ್ಕೆ ತುಂಡಾಗಿವೆ.
ಬೆಜ್ಜವಳ್ಳಿಯ ವಿದ್ಯುತ್ ಪೂರೈಕೆ ಸಬ್ ಸ್ಟೇಷನ್ ಸಂಪರ್ಕದ ವಿದ್ಯುತ್ ಕಂಬದ ಮೇಲೆ ಮರ ಉರುಳಿದೆ. ಕಂಬಗಳು ತುಂಡಾಗಿದ್ದು ಹಲವು ಗ್ರಾಮಕ್ಕೆ ಗುರುವಾರ ರಾತ್ರಿಯಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಬದಲಿ ಕಂಬಗಳನ್ನು ನಿಲ್ಲಿಸಿ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಕ್ರಮ ಕೈಗೊಂಡಿದೆ.

ಭಾರಿ ಜೋರಾಗಿ ಬೀಸಿದ ಗಾಳಿಯಿಂದ ಕಾಡಿನಲ್ಲಿ ಮರಗಳು ಉರುಳಿವೆ. ಕೊಂಬೆಗಳು ತುಂಡಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಸುಮಾರು ಅರ್ಧ ಗಂಟೆ ಸುರಿದ ಮಳೆ ನಡುವೆ ಬೀಸಿದ ಗಾಳಿ ಮಳೆ ನೀರನ್ನು ಮನೆ ಒಳಗೆ ಸೇರಿಸಿದೆ. ರಾತ್ರಿ ನೀರನ್ನು ಹೊರಕ್ಕೆ ಹಾಕಲು ಜನರು ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ : ‘ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಸಿದ್ದರಾಮಯ್ಯ ರಾಜ್ಯದ ಕ್ಷಮೆಯಾಚಿಸಬೇಕುʼ


