ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019
ಮಲೆನಾಡು ಭಾಗದ ಸರ್ಕಾರಿ ಶಾಲೆ ಉಳಿವಿಗೆ ಯುವಕರ ವಿಭಿನ್ನ ಪ್ರಯತ್ನ. ಅಂಟಿಗೆ ಪಂಟಿಗೆ ಮೂಲಕ ಜನರಲ್ಲಿ ಜಾಗೃತಿ. ಮನೆ ಮನೆಗು ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ.
ಮಲೆನಾಡಿಗರ ಪ್ರಮುಖ ಆಚರಣೆಗಳಲ್ಲಿ ಒಂದು ಅಂಟಿಗೆ ಪಂಟಿಗೆ. ದೀಪಾವಳಿ ಸಂದರ್ಭ ಮನೆ ಮನೆಗು ತೆರಳಿ ದೀಪ ಬೆಳಗಿಸಲಾಗುತ್ತದೆ. ಇದೆ ಅಂಟಿಗೆ ಪಂಟಿಗೆಯನ್ನು ಸರ್ಕಾರಿ ಶಾಲೆ ಉಳಿವಿನ ಜಾಗೃತಿ ಯಾತ್ರೆಯಾಗಿ ಪರಿವರ್ತಿಸಿಕೊಂಡಿದೆ ತೀರ್ಥಹಳ್ಳಿಯ ಯುವಕರ ತಂಡ.
ಎರಡು ವರ್ಷದಿಂದ ಇವರ ಪ್ರಯತ್ನಕ್ಕೆ ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಅಂಟಿಗೆ ಪಂಟಿಗೆ ತಂಡ ಮನೆ ಮೆನಗು ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜಾಗೃತಿ ಮೂಡಿಸುತ್ತಾರೆ. ಮನೆಯವರು ನೀಡುವ ಕಾಣಿಕೆ ಹಣವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಸಮೀಪದ ಕೆಂದಾಳಬೈಲು ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಉಳಿವಿಗಾಗಿ ಅಂಟಿಗೆ ಪಂಟಿಗೆ ನಡೆಸಲಾಯಿತು.
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅರಂಭವಾದ ಅಂಟಿಗೆ ಪಂಟಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಹೇಗಿದೆ ಅಂಟಿಗೆ ಪಂಟಿಗೆ ತಂಡ? ಯಾರೆಲ್ಲ ಇದ್ದಾರೆ? ಇದರ ಕಂಪ್ಲೀಟ್ ವಿಡಿಯೋ ಲಿಂಕ್ ಮೇಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200