ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 ಜುಲೈ 2021
ಅಪರಾಧಿಗಳನ್ನು ಪತ್ತೆ ಹಚ್ಚುವುದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಷ್ಟೆ ಪೊಲೀಸರ ಕರ್ತವ್ಯವಲ್ಲ. ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವುದು ಕೂಡ ಇಲಾಖೆ ಜವಾಬ್ದಾರಿಯಾಗಿದೆ. ಇದೆ ಉದ್ದೇಶದಿಂದ ಪೊಲೀಸ್ ಠಾಣೆಯೊಂದರ ಪಿಎಸ್‍ಐ ಒಬ್ಬರು ಆರಂಭಿಸಿದ ಫೇಸ್‍ಬುಕ್ ಖಾತೆ, ಈಗ ಠಾಣೆ ವ್ಯಾಪ್ತಿಯಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆಗುಂಬೆ ಪೊಲೀಸ್ ಠಾಣೆ ಹೆಸರಿನ ಫೇಸ್‍ಬುಕ್ ಖಾತೆ ಜನ ಮೆಚ್ಚುಗೆ ಗಳಿಸಿದೆ. ಇಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳು ವೈರಲ್ ಆಗುತ್ತಿವೆ. ಹತ್ತಾರು ಕಡೆ ಷೇರ್ ಆಗುತ್ತಿವೆ.
ಫೇಸ್ಬುಕ್ನಲ್ಲಿ ಏನೇನೆಲ್ಲ ಪ್ರಕಟವಾಗುತ್ತಿದೆ
ಆಗುಂಬೆ ಪೊಲೀಸ್ ಠಾಣೆ ಫೇಸ್‍ಬುಕ್ ಖಾತೆ ಮಾಹಿತಿ ಕಣಜ. ವಂಚಕರ ಜಾಲದ ಕುರಿತು ಜಾಗೃತಿ ಮೂಡಿಸುವ ಫೋಟೊ, ಸಂದೇಶಗಳು ಇಲ್ಲಿವೆ. ಕರೋನ ಕುರಿತು ಮುನ್ನೆಚ್ಚರಿಕೆ ವಹಿಸುವ ಮಾಹಿತಿಗಳಿಗೆ. ರಸ್ತೆ ಸುರಕ್ಷತೆ, ಸಾಮಾಜಿಕ ಜಾಲತಾಣೆದಲ್ಲಿನ ವಂಚನೆಗಳ ಕುರಿತು ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಇದಿಷ್ಟೆ ಅಲ್ಲ ಇತ್ತೀಚೆಗೆ ಆರಂಭಿಸಲಾಗಿರುವ ದಿನಕ್ಕೊಂದು ಮಾಹಿತಿಯ ಸರಣಿ ವೈರಲ್ ಆಗಿವೆ. ಹೆಚ್ಚು ಲೈಕ್ಸ್, ಷೇರ್‍ಗಳನ್ನು ಹೊಂದಿದೆ.
ಠಾಣೆ ವ್ಯಾಪ್ತಿಯಲ್ಲಿ ಜಾಗೃತಿ
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ, ಕುಂದು ಕೊರತೆ ಆಲಿಸಲಾಗುತ್ತದೆ. ಆದರೆ ಒಮ್ಮೆಲೆ ಅತಿ ಹೆಚ್ಚು ಜನರನ್ನು ತಲುಪುವ ಸಲುವಾಗಿ ಫೇಸ್‍ಬುಕ್ ಖಾತೆ ಆರಂಭಿಸಲಾಗಿದೆ.
‘ಜಾಗೃತಿ ಸಭೆಗಳನ್ನು ಮಾಡಿದರೆ ಒಂದು ಕಡೆ ಸುಮಾರು 20 – 30 ಮಂದಿ ಸೇರಬಹುದು. ಆದರೆ ಬಹುತೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುತ್ತಾರೆ. ಇದೆ ಕಾರಣಕ್ಕೆ ಜಾಗೃತಿ ಸಭೆಗಳ ಜೊತೆಗೆ ಫೇಸ್‍ಬುಕ್ ಮೂಲಕವು ಜಾಗೃತಿ ಮೂಡಿಸಲಾಗುತ್ತಿದೆ’ ಅನ್ನುತ್ತಾರೆ ಪಿಎಸ್ಐ ಶಿವಕುಮಾರ್.
ನೆರವಿಗೆ ನಿಲ್ಲುತ್ತಾರೆ, ಭರವಸೆ ಮೂಡಿಸುತ್ತಾರೆ
ಸಾಮಾಜಿಕ ಜಲಾತಾಣ ಹೊರತಾಗಿ ಆಗುಂಬೆ ಠಾಣೆ ಪೊಲೀಸರು ಸ್ಥಳೀಯರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ತುರ್ತು ಸಂದರ್ಭ ಹಲವರಿಗೆ ನೆರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಜನರಿಗೆ ಜಾಗೃತಿ ಮೂಡಿಸುತ್ತಿರುವುದು ಹೊಸ ಪ್ರಯತ್ನವಾಗಿದೆ ಅನ್ನುತ್ತಾರೆ ಸ್ಥಳೀಯರಾದ ನಿತ್ಯಾನಂದ ಆಗುಂಬೆ.
ಆಗುಂಬೆ ಠಾಣೆ ಪೊಲೀಸರ ಈ ಕಾರ್ಯ ಜನ ಮೆಚ್ಚುಗೆ ಪಡೆದಿದೆ. ಅಲ್ಲದೆ ಜನ ಜಾಗೃತರಾಗಲು ಅನುಕೂಲವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200