SHIVAMOGGA LIVE NEWS | 29 MAY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
THIRTHAHALLI : ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೆ ಅರಣ್ಯ ರಕ್ಷಕ (GUARD) ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ವಲಯ ಅರಣ್ಯ ವಿಭಾಗದಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿವಹಿಸುತ್ತಿದ್ದ ಬಸವರಾಜ್ (34) ಮೃತರು. ಬೆಜ್ಜವಳ್ಳಿಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು.
ಸೋಮವಾರ ರಾತ್ರಿ ಬಸವರಾಜ್ ಅವರು ಮನೆಗೆ ಬಂದಾಗ ಎಲ್ಲರು ನೋಡಿದ್ದರು. ಬೆಳಗ್ಗೆ ಬಹು ಹೊತ್ತು ಹೊರಗೆ ಬಾರದಿದ್ದರಿಂದ ಸ್ಥಳೀಯರು ಅನುಮಾನಗೊಂಡಿದ್ದಾರೆ. ಬಾಗಿಲು ತೆಗೆದಾಗ ಬಸವರಾಜ್ ಮಲಗಿದ್ದಲ್ಲೆ ಮೃತಪಟ್ಟಿದ್ದರು. ಮಾಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಕಡಿಮೆಯಾದ ಮಳೆ, ಹೆಚ್ಚಿದ ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಸವರಾಜ್, 2018ರಲ್ಲಿ ಅರಣ್ಯ ಇಲಾಖೆ ಕರ್ತವ್ಯಕ್ಕೆ ಸೇರಿದ್ದರು. 3 ವರ್ಷದ ಹಿಂದೆ ತೀರ್ಥಹಳ್ಳಿ ವಲಯಾರಣ್ಯ ವಿಭಾಗಕ್ಕೆ ಬಂದಿದ್ದು, ಬೆಜ್ಜವಳ್ಳಿ, ಮಹಿಷಿ, ದಬ್ಬಣಗದ್ದೆ, ಕುಡುಮಲ್ಲಿಗೆ, ಜನಗಲ್ ಗ್ರಾಮಗಳ ವ್ಯಾಪ್ತಿಯ ಅರಣ್ಯ ರಕ್ಷಕರಾಗಿದ್ದರು. ಬಸವರಾಜ್ ಪತ್ನಿ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






