ತೋಟದಿಂದ ಮರಳಿದಾಗ ಮನೆ ಬಾಗಿಲು ತೆರೆದಿತ್ತು, ಒಳಗೆ ಹೋದ ರೈತನಿಗೆ ಆಘಾತ ಕಾದಿತ್ತು

ತೀರ್ಥಹಳ್ಳಿ: ರೈತರೊಬ್ಬರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಶೇಡ್ಗಾರಿನಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ಬಂಗಾರದ ಪೆಂಡೆಂಟ್, ಬೆಳ್ಳಿ ಖಡ್ಗ ಹಾಗೂ ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಶೇಡ್ಗಾರು ನಿವಾಸಿ ಉಮೇಶ.ಎಸ್.ಡಿ. ಅವರ ಮನೆಯಲ್ಲಿ ಕಳ್ಳತನವಾಗಿದೆ. ಉಮೇಶ್‌ ಅವರು ಬೆಳಿಗ್ಗೆ ತೋಟಕ್ಕೆ ತೆರಳಿದ್ದರು, ಪತ್ನಿ ಮತ್ತು ಮಗ ಸಂಬಂಧಿಯ ಮನೆಗೆ ಹೋಗಿದ್ದರು. ಸಂಜೆ ಉಮೇಶ ಅವರು ಮನೆಗೆ ಬಂದಾಗ ಬಾಗಿಲಿನ ಬೀಗ ಒಡೆದಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Maluru-Police-Station-in-Thirthahalli-taluk.webp

ಕೊಠಡಿಯ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಲಾಕರ್‌ನಲ್ಲಿದ್ದ ಸುಮಾರು ₹72,000 ಮೌಲ್ಯದ 6 ಗ್ರಾಂ ತೂಕದ ಬಂಗಾರದ ಪೆಂಡೆಂಟ್, ₹3,000 ಮೌಲ್ಯದ ಬೆಳ್ಳಿ ಖಡ್ಗ ಹಾಗೂ ₹3,000 ನಗದು ನಾಪತ್ತೆಯಗಿತ್ತು. ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ₹78,000 ಎಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.