ಎಳ್ಳಮಾವಾಸ್ಯೆ ಜಾತ್ರೆ, ತೀರ್ಥಹಳ್ಳಿಯಲ್ಲಿ ಸಂಗ್ರಹವಾಗಲಿದೆ ಹೊರೆ ಕಾಣಿಕೆ, ನಾಲ್ಕು ವಾಹನಗಳಿಗೆ ಸಿಕ್ತು ಚಾಲನೆ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 2 JANUARY 2023

THIRTHAHALLI : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಹೊರೆ ಕಾಣಿಕೆ ಸಂಗ್ರಹಿಸುವ ವಾಹನಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಆವರಣದಲ್ಲಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್‌ ನಾಲ್ಕು ವಾಹನಗಳಿಗೆ ಚಾಲನೆ ನೀಡಿದರು.

ಏನಿದು ಹೊರೆ ಕಾಣಿಕೆ ವಾಹನ?

ಜ.11ರಿಂದ ಮೂರು ದಿನ ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯಲಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜಾತ್ರೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಇದಕ್ಕಾಗಿ ಭಕ್ತರಿಂದ ಹೊರೆ ಕಾಣಿಕೆ ಸಂಗ್ರಹಿಸಲಾಗುತ್ತದೆ. ಹೊರೆ ಕಾಣಿಕೆ ಸಂಗ್ರಹಿಸಲು ನಾಲ್ಕು ವಾಹನಗಳಿಗೆ ಚಾಲನೆ ನೀಡಲಾಗಿದೆ. ಈ ವಾಹನಗಳು ತಾಲೂಕಿನ ವಿವಿಧೆಡೆ ತೆರಳಿ ಭಕ್ತರಿಂದ ಕಾಣಿಕೆ ಸಂಗ್ರಹಿಸಲಿವೆ. ವಾಹನಗಳಿಗೆ ಹೊರೆ ಕಾಣಿಕೆ ತಲುಪಿಸಲು ಸಾಧ್ಯವಾಗದಿದ್ದರೆ, ದೇಗುಲದ ಕಚೇರಿಯಲ್ಲಿಯು ಸಲ್ಲಿಸಬಹುದಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

ಇದನ್ನೂ ಓದಿ – ಶಿವಮೊಗ್ಗದ ಸ್ಮಾರ್ಟ್‌ ಸಿಟಿ ಗಡಿಯಾರದಲ್ಲಿ ದಿಕ್ಕಿಗೊಂದು ಟೈಮ್‌

ಹೆಚ್ಚಿನ Shimoga News, Shivamogga News ಮತ್ತು THIRTHAHALLI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜನವರಿ 2, 2024

Leave a Comment