ಮತ್ತೊಂದು ಸುತ್ತಿನ ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ ಸಜ್ಜು, ಎಲ್ಲಿಂದೆಲ್ಲಿಗೆ ಪಾದಯಾತ್ರೆ? ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆಗಳನ್ನು ನಡೆಸುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಏನೆಲ್ಲ ಹಗರಣಗಳಾಗಿವೆ? ಪಟ್ಟಿ ಬಿಡುಗಡೆ ಯಾವಾಗ?

ಆರಗ ಜ್ಞಾನೇಂದ್ರ ಕ್ಷೇತ್ರದ ಶಾಸಕರಾಗುವ ಬದಲು ಬಿಜೆಪಿ ಶಾಸಕರಾಗಿದ್ದಾರೆ. ಅವರು ಶಾಸಕರಾದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಸಕರ ಬೆಂಬಲಿಗರೇ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಬಿಜೆಪಿ ತಾ.ಪಂ ಸದಸ್ಯರೊಬ್ಬರು ಪ್ರತೀ ದಿನ 500 ರೂ. ನೀಡುವಂತೆ ಪಿಡಿಓಗಳಿಗೆ ಒತ್ತಾಯಿಸುತ್ತಿದ್ದಾರೆ ಹೀಗೆ ಅನೇಕ ಹಗರಣಗಳಿದ್ದು ಇವುಗಳ ಪಟ್ಟಿಯನ್ನು ಜನವರಿ 3ರಂದು ಬಿಡುಗಡೆ ಮಾಡುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

48360555 754484201579669 3589043387442921472 n.jpg? nc cat=110& nc ht=scontent.fblr1 4

ಪಾದಯಾತ್ರೆ ಯಾವಾಗ? ಎಲ್ಲೆಲ್ಲಿಂದ ನಡೆಯುತ್ತೆ?

ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗಳ ಪಟ್ಟಿ ಬಿಡುಗಡೆ ಮುನ್ನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಎರಡು ಪಾದಯಾತ್ರೆ ನಡೆಸಲಿದ್ದಾರೆ. ಡಿ.17ರಂದು ಮೇಳಿಯಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಇನ್ನು, ಜನವರಿ 3ರಂದು ಗುಡ್ಡೇಕೊಪ್ಪದಿಂದ ತೀರ್ಥಹಳ್ಳಿವರೆಗೂ ಪಾದಯಾತ್ರೆ ನಡೆಸಲಿದ್ದಾರೆ.

ಆಗುಂಬೆಯಿಂದ ಶಿವಮೊಗ್ಗಕ್ಕೆ ಪಾದಯಾತ್ರೆ

ಇನ್ನು, ಕೇಂದ್ರ ಸರ್ಕಾರದ ವಿರುದ್ಧ ಕಿಮ್ಮನೆ ರತ್ನಾಕರ್ ಅವರು ಮತ್ತೊಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಪಾದಯಾತ್ರೆ ನಡೆಯಲಿದೆ. ಆಗುಂಬೆಯಿಂದ ಶಿವಮೊಗ್ಗದವರೆಗೆ ಈ ಪಾದಯಾತ್ರೆ ಸಾಗಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಕರೆ ಮಾಡಿ | 9964634494

ಈ ಮೇಲ್ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment