ಮನೆಯ ಬೀಗ ಮುರಿದು ₹25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published On : ಏಪ್ರಿಲ್ 18, 2026

Published By : ನಿತಿನ್‌ ಆರ್‌.ಕೈದೊಟ್ಲು 

ತೀರ್ಥಹಳ್ಳಿ: ತಾಲೂಕಿನ ಕೆರೋಡಿ ತೂದೂರು ಗ್ರಾಮದ ಮನೆಯೊಂದರ ಬೀಗ ಮುರಿದು ಸುಮಾರು ₹25 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಕಳ್ಳತನ (massive burglary) ಮಾಡಿರುವ ಘಟನೆ ನಡೆದಿದೆ. ಅರ್ಪಿತಾ ಎಂಬುವವರ ತವರು ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಕಳ್ಳತನವಾಗಿದೆ.

ಅರ್ಪಿತಾ ಅವರು ಮಗನೊಂದಿಗೆ ತವರು ಮನೆಗೆ ಬಂದಿದ್ದರು. ಏಪ್ರಿಲ್ 15ರಂದು ಮನೆಯವರೆಲ್ಲರೂ ಬೀಗ ಹಾಕಿಕೊಂಡು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮರುದಿನ ಬೆಳಗ್ಗೆ ಪಕ್ಕದ ಮನೆಯವರು ಫೋನ್ ಕರೆ ಮಾಡಿ ಮನೆಯ ಬಾಗಿಲು ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅರ್ಪಿತಾ ಅವರು ಬಂದು ನೋಡಿದಾಗ ಕಳ್ಳರು ಮುಂಭಾಗದ ಬಾಗಿಲಿನ ಲಾಕ್ ಕಟ್ ಮಾಡಿ ಒಳನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ.

House-theft-at-kerodu-tuduru-in-thirthahalli

ಮನೆಯೊಳಗಿದ್ದ ಬೀರುವಿನ ಬೀಗ ಒಡೆದ ಕಳ್ಳರು, ಅದರಲ್ಲಿದ್ದ ಹಾರಗಳು, ತಾಳಿಸರ, ನೆಕ್ಲೆಸ್, ಬಳೆಗಳು ಹಾಗೂ ಉಂಗುರಗಳು ಸೇರಿದಂತೆ ಒಟ್ಟು 226 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಇದರೊಂದಿಗೆ ಬೆಳ್ಳಿಯ ಸಾಮಗ್ರಿಗಳನ್ನು ಕೂಡ ಕದ್ದೊಯ್ದಿದ್ದಾರೆ. ಇವುಗಳ ಒಟ್ಟು ಮೌಲ್ಯ ₹25,11,000 ಎಂದು ಅಂದಾಜಿಸಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮನೆ ಬೀಗ ಮುರಿದು ₹8.10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 18, 2026

Leave a Comment